HomeIndiaವೈರಲ್ ಆಯ್ತು CJI ಚಂದ್ರಚೂಡ್ ಮರ್ಸಿಡಿಸ್ ಕಾರ್ ನಂಬರ್ ಪ್ಲೇಟ್: ಕಾರಣ ಗೊತ್ತಾ…?

ವೈರಲ್ ಆಯ್ತು CJI ಚಂದ್ರಚೂಡ್ ಮರ್ಸಿಡಿಸ್ ಕಾರ್ ನಂಬರ್ ಪ್ಲೇಟ್: ಕಾರಣ ಗೊತ್ತಾ…?

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಬಳಸುತ್ತಿದ್ದ ಕಾರ್ ನ ನಂಬರ್ ಪ್ಲೇಟ್‌ ನ ಚಿತ್ರವು ಎಲ್ಲಾ ಸರಿಯಾದ ಕಾರಣಗಳಿಗಾಗಿ ಭಾನುವಾರ ವೈರಲ್ ಆಗಿದೆ.

ಬ್ಯುಸಿನೆಸ್ ಎಕ್ಸಿಕ್ಯೂಟಿವ್ ಲಾಯ್ಡ್ ಮಥಿಯಾಸ್ ಎಂಬುವವರು ಈ ಕಾರ್ ಚಿತ್ರವನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಾರಣ? ಪ್ಲೇಟ್‌ನಲ್ಲಿರುವ ಸಂಖ್ಯೆಯು ‘DL1 CJI 0001’ ಎಂದು ಬರೆಯಲಾಗಿದೆ.

ನಿನ್ನೆ ದೆಹಲಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಧನಂಜಯ್ ಚಂದ್ರಚೂಡ್ ಅವರನ್ನು ನೋಡಿದ್ದೇನೆ. ನಾನು ಹೊರಡುವಾಗ ಅವರ ಕಾರ್ ನ ಲೈಸೆನ್ಸ್ ಪ್ಲೇಟ್ ಸಂಖ್ಯೆ: DL1 CJI 0001 ಗಮನಿಸಿದೆ. ಮುಖ್ಯ ಚುನಾವಣಾ ಆಯುಕ್ತರ ಕಾರಿನ ನಂಬರ್ ಪ್ಲೇಟ್ DL1 CEC 0001 ಎಂದಿದ್ದರೆ..? ಎಂದು ಮಥಿಯಾಸ್ ಕಾರ್ ಚಿತ್ರದೊಂದಿಗೆ ಎಕ್ಸ್‌ ನಲ್ಲಿ ಬರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

Mercedes E 350 D ಮಾದರಿಯ ಮಾಲೀಕತ್ವವನ್ನು ಭಾರತದ ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಸಿಜೆಐಗೆ ಸರ್ಕಾರದಿಂದ ಕಾರನ್ನು ಒದಗಿಸಲಾಗಿದೆ ಎಂದು ಇದು ಸ್ಪಷ್ಟಪಡಿಸುತ್ತದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular