ಬೆಂಗಳೂರು: ಪೋಷಕರಿಗೆ ತಿಳಿಸದೆ ಬಾಲಕಿ ಮದುವೆ ಮಾಡಿಸಿದ ಘಟನೆ ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ನಡೆದಿದೆ.
ಫೆಬ್ರವರಿ 15ರಂದು 14 ವರ್ಷದ ಬಾಲಕಿಯನ್ನು ಆಕೆಯ ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ 24 ವರ್ಷದ ಯುವಕನೊಂದಿಗೆ ಮದುವೆ ಮಾಡಿಸಿದ್ದಾರೆ. ತಂದೆ ತಾಯಿಗೆ ಈ ವಿಚಾರ ತಿಳಿಸದೆ ಅಪ್ರಾಪ್ತಳಾಗಿರುವ ಪುತ್ರಿಯನ್ನು ಪುಸಲಾಯಿಸಿ ಕೈವಾರದ ದೇವಾಲಯದಲ್ಲಿ ಮದುವೆ ಮಾಡಿಸಲಾಗಿದೆ.
ಬಾಲಕಿಯ ಮದುವೆ ಮಾಡಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸರ್ಜಾಪುರ ಠಾಣೆಗೆ ಬಾಲಕಿಯ ತಾಯಿ ದೂರು ನೀಡಿದ್ದಾರೆ.