HomeKarnatakaಟೋಲ್ ಸಿಬ್ಬಂದಿ ಹಾಗೂ ಪ್ರಯಾಣಿಕರ ನಡುವೆ ಗಲಾಟೆ, ಹಲ್ಲೆ: ಮಹಿಳೆ ಸೇರಿ ಇಬ್ಬರ ಸ್ಥಿತಿ ಗಂಭೀರ

ಟೋಲ್ ಸಿಬ್ಬಂದಿ ಹಾಗೂ ಪ್ರಯಾಣಿಕರ ನಡುವೆ ಗಲಾಟೆ, ಹಲ್ಲೆ: ಮಹಿಳೆ ಸೇರಿ ಇಬ್ಬರ ಸ್ಥಿತಿ ಗಂಭೀರ

ಕುಮಟಾ: ಫಾಸ್ಟ್ ಟ್ಯಾಗ್ ತಾಂತ್ರಿಕ ಸಮಸ್ಯೆ ವಿಚಾರವಾಗಿ ಟೋಲ್ ಸಿಬ್ಬಂದಿ ಹಾಗೂ ಪ್ರಯಾಣಿಕರ ನಡುವೆ ಗಲಾಟೆ ನಡೆದು, ಟೋಲ್ ಸಿಬ್ಬಂದಿ ಪ್ರಯಾಣಿಕರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಳೆಗದ್ದೆ ಟೋಲ್ ನಲ್ಲಿ ನಡೆದಿದೆ.

ಟೋಲ್ ನಲ್ಲಿ ಫಾಸ್ಟ್ ಟ್ಯಾಗ್ ನಿಂದ ಹಣ ಕಡಿತವಾಗದೇ ಸಮಸ್ಯೆಯಾಗಿದೆ. ಈ ವೇಳೆ ಟೋಲ್ ಸಿಬ್ಬಂದಿಗಳಾದ ಮಂಜುನಾಥ್, ಸತೀಶ್, ಕಿರಣ್ ಎಂಬುವವರು ಪ್ರಯಾಣಿಕರ ಜೊತೆ ಜಗಳ ಶುರುಮಾಡಿದ್ದಾರೆ. ಕೋಪದ ಬರದಲ್ಲಿ ಟೋಲ್ ಸಿಬ್ಬಂದಿ ಕಾರಿನ ಗಾಜು ಒಡೆದು ಪುಡಿ ಪುಡಿ ಮಾಡಿದ್ದಾರೆ. ಕಾರಿನಲ್ಲಿದ್ದ ಮಹಿಳೆ ಹಾಗೂ ಮಜೀಜ್ ಸಯ್ಯದ್ ಎಂಬುವವರಿಗೆ ಗಂಭೀರ ಗಾಯಗಳಾಗಿವೆ.

ಮಂಗಳೂರಿನ ಪಲ್ನೀರಿನ ಮುಜೀಜ್ ತನ್ನ ಕುಟುಂಬದೊಂದಿಗೆ ಕಾರಿನಲ್ಲಿ ಕುಮಟಾ ಮಾರ್ಗವಾಗಿ ಲಕ್ಷ್ಮೀಶ್ವರಕ್ಕೆ ಹೋಗುತ್ತಿದ್ದಾಗ ಹೊಳೆಗದ್ದೆ ಟೋಲ್ ನಲ್ಲಿ ಈ ಘಟನೆ ನಡೆದಿದೆ. ಗಾಯಾಳುಗಳು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

For Latest News Updates, Join Our Whatsapp Community🚩
RELATED ARTICLES

Most Popular