ರಾಜ್ ಕೋಟ್: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಎರಡನೇ ದಿನದಾಟದ ವೇಳೆ ಬ್ಯಾಟರ್ ಜಾಕ್ ಗ್ರಾವವ್ಲಿ ಅವರನ್ನು ಔಟ್ ಮಾಡುವ ಮೂಲಕ ಭಾರತದ ಆರ್. ಅಶ್ವಿನ್ 500 ವಿಕೆಟ್ ಕಬಳಿಸಿದ ಮೈಲಿಗಲ್ಲು ಸ್ಥಾಪಿಸಿದ್ದಾರೆ.
37 ವರ್ಷದ ಅಶ್ವಿನ್ ಈ ಸಾಧನೆ ಮಾಡುವುದರೊಂದಿಗೆ 500 ವಿಕೆಟ್ ಕಬಳಿಸಿದ ಎರಡನೇ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅನಿಲ್ ಕುಂಬ್ಳೆ 619 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದು, ಆರ್. ಅಶ್ವಿನ್ 500 ವಿಕೆಟ್ ಗಳಿಸಿದ ಎರಡನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಧಿಕ ವಿಕೆಟ್ ಪಡೆದವರು
ಮುತ್ತಯ್ಯ ಮುರಳಿಧರನ್ 800
ಶೇನ್ ವಾರ್ನ್ 708
ಜೇಮ್ಸ್ ಅಂಡರ್ಸನ್ 696
ಅನಿಲ್ ಕುಂಬ್ಳೆ 619
ಸ್ಟುವರ್ಡ್ ಬ್ರಾಡ್ 604
ಗ್ಲೆನ್ ಮ್ಯಾಕ್ ಗ್ರಾಥ್ 563
ಕರ್ಟ್ನಿ ವಾಲ್ಷ್ 519
ನಾಥನ್ ಲಯಾನ್ 517
ಆರ್. ಅಶ್ವಿನ್ 500
5⃣0⃣0⃣ reasons to celebrate 👏👏
Way to go, @ashwinravi99! 🙌#TeamIndia | #INDvENG | @IDFCFIRSTBank pic.twitter.com/LTTwphmY8q
— BCCI (@BCCI) February 16, 2024

