alex Certify ಈರುಳ್ಳಿ ಎಲೆಗಳಲ್ಲಿವೆ ಅದ್ಭುತ ಪ್ರಯೋಜನಗಳು; ಚಳಿಗಾಲದಲ್ಲಿ ತಪ್ಪದೇ ಸೇವಿಸಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈರುಳ್ಳಿ ಎಲೆಗಳಲ್ಲಿವೆ ಅದ್ಭುತ ಪ್ರಯೋಜನಗಳು; ಚಳಿಗಾಲದಲ್ಲಿ ತಪ್ಪದೇ ಸೇವಿಸಿ….!

ಹಸಿರು ತರಕಾರಿಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದರಲ್ಲೂ ಈರುಳ್ಳಿ ಎಲೆಗಳ ಪ್ರಯೋಜನಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಚಳಿಗಾಲದಲ್ಲಿ ಈರುಳ್ಳಿ ಎಲೆಗಳನ್ನು ತಿನ್ನಬೇಕು. ಮಾರುಕಟ್ಟೆಯಲ್ಲಿ ಇದಕ್ಕೆ ಸಾಕಷ್ಟು ಬೇಡಿಕೆಯಿದೆ.

ಜೀರ್ಣಕಾರಿ ಸಮಸ್ಯೆ

ಹಸಿರು ಈರುಳ್ಳಿ ಎಲೆಗಳನ್ನು ಸೇವಿಸಿದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರುವುದಿಲ್ಲ. ಅನೇಕ ಜನರಿಗೆ ಮಲಬದ್ಧತೆ ಸಮಸ್ಯೆ ಇರುತ್ತದೆ. ಅಂಥವರು ಹೊಟ್ಟೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಈರುಳ್ಳಿ ಎಲೆಗಳನ್ನು ಸೇವನೆ ಮಾಡಬೇಕು.

ಮೂಳೆಗಳ ಬಲವರ್ಧನೆ

ಮೂಳೆಗಳನ್ನು ಬಲಪಡಿಸಲು ಹಸಿರು ಈರುಳ್ಳಿ ಎಲೆಗಳನ್ನು ಸಹ ಸೇವಿಸಬೇಕು. ಮೂಳೆಗಳನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡಲು ಇದು ಉತ್ತಮವೆಂದು ಪರಿಗಣಿಸಲಾಗಿದೆ. ಚಳಿಗಾಲದಲ್ಲಿ ಕಾಡುವ ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳಿಗೆ ಇದರಲ್ಲಿ ಪರಿಹಾರವಿದೆ. ಅಷ್ಟೇ ಅಲ್ಲ ಇದರಲ್ಲಿ ಉರಿಯೂತ ಶಮನಕಾರಿ ಗುಣಗಳಿದ್ದು, ಶೀತ ವಾತಾವರಣದಲ್ಲಿ ದೇಹವನ್ನು ಆರೋಗ್ಯವಾಗಿಡುತ್ತದೆ.

ಮಧುಮೇಹ

ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಈರುಳ್ಳಿ ಎಲೆ  ತುಂಬಾ ಸಹಾಯಕವಾಗಿದೆ. ವಾರಕ್ಕೆ ಕನಿಷ್ಠ 3 ಬಾರಿ ಸೇವಿಸಬೇಕು. ಮಧುಮೇಹ-ವಿರೋಧಿ ಗುಣಲಕ್ಷಣಗಳನ್ನು ಇದು ಒಳಗೊಂಡಿದೆ. ದೃಷ್ಟಿಯ ತೀಕ್ಷ್ಣತೆಯನ್ನು ಕೂಡ ಇದು ಹೆಚ್ಚಿಸಬಲ್ಲದು. ಈರುಳ್ಳಿ ಎಲೆಗಳಲ್ಲಿ ಕ್ಯಾರೊಟಿನಾಯ್ಡ್‌ಗಳು, ವಿಟಮಿನ್ ಎ ಇರುತ್ತದೆ. ಇದು ಕಣ್ಣುಗಳಿಗೆ ಅವಶ್ಯಕವಾಗಿದೆ.

ರೋಗ ನಿರೋಧಕ ಶಕ್ತಿ

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಈರುಳ್ಳಿ ಎಲೆಗಳನ್ನು ಸೇವನೆ ಮಾಡಿ. ಅನೇಕ ವಿಟಮಿನ್‌ಗಳು ಇದರಲ್ಲಿ ಕಂಡುಬರುತ್ತವೆ.

ತೂಕ ಇಳಿಕೆ

ಶೀತ ವಾತಾವರಣದಲ್ಲಿ ತೂಕವು ಬಹಳಷ್ಟು ಹೆಚ್ಚಾಗುತ್ತದೆ. ತೂಕವನ್ನು ಕಡಿಮೆ ಮಾಡಲು ಪ್ರತಿದಿನ ಹಸಿರು ತರಕಾರಿಗಳನ್ನು ಸೇವಿಸಬೇಕು. ಅಧಿಕ ರಕ್ತದೊತ್ತಡ ಇರುವ ರೋಗಿಗಳಿಗೂ ಇದರಿಂದ ಪರಿಹಾರ ಸಿಗುತ್ತದೆ. ಈರುಳ್ಳಿ ಎಲೆಯಲ್ಲಿರುವ ಸಲ್ಫರ್ ಸಂಯುಕ್ತ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...