HomeIndiaBREAKING : ದೆಹಲಿಯ ಪೇಂಟ್ ಫ್ಯಾಕ್ಟರಿಯಲ್ಲಿ ಭೀಕರ ಅಗ್ನಿ ದುರಂತ : 7 ಮಂದಿ ಸಜೀವ...

BREAKING : ದೆಹಲಿಯ ಪೇಂಟ್ ಫ್ಯಾಕ್ಟರಿಯಲ್ಲಿ ಭೀಕರ ಅಗ್ನಿ ದುರಂತ : 7 ಮಂದಿ ಸಜೀವ ದಹನ

ನವದೆಹಲಿ: ದೆಹಲಿಯ ಅಲಿಪುರದ ದಯಾಳ್ಪುರ ಮಾರುಕಟ್ಟೆಯಲ್ಲಿ ಗುರುವಾರ ಪೇಂಟ್ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು ಏಳು ಜನರು ಸಾವನ್ನಪ್ಪಿದ್ದಾರೆ.

ಗುರುವಾರ ಸಂಜೆ 5.30 ರ ಸುಮಾರಿಗೆ ಕಾರ್ಖಾನೆಯಲ್ಲಿ ಬೆಂಕಿಯ ಬಗ್ಗೆ ಕರೆ ಬಂದಿದ್ದು, ತಕ್ಷಣಕ್ಕೆ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ತೆರಳಿ ಬೆಂಕಿ ನಂದಿಸುವ ಕೆಲಸ ಮಾಡಿದೆ. ಆದರೆ ಘಟನೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ (ಡಿಎಫ್ಎಸ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯ ವೀಡಿಯೊದಲ್ಲಿ, ಕಾರ್ಖಾನೆಯಿಂದ ಭಾರಿ ಜ್ವಾಲೆಗಳು ಹೊರಬರುತ್ತಿರುವುದನ್ನು ಮತ್ತು ಹೊಗೆ ಮೋಡಗಳು ಪ್ರದೇಶವನ್ನು ಆವರಿಸಿರುವುದನ್ನು ಕಾಣಬಹುದು. ಪೊಲೀಸರ ಪ್ರಕಾರ, ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸುವ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular