ಅಲಬಾಮಾ: ಅಮೆರಿಕದ ಅಲಬಾಮಾದಲ್ಲಿ ಬಾಡಿಗೆ ರೂಮಿನ ವಿಚಾರವಾಗಿ ನಡೆದ ಜಗಳದ ವೇಳೆ ಗ್ರಾಹಕರೊಬ್ಬರು ಗುಂಡು ಹಾರಿಸಿದ್ದರಿಂದ ಭಾರತೀಯ ಮೂಲದ ಮೋಟೆಲ್ ಮಾಲಕರೊಬ್ಬರು ಹತ್ಯೆಗೀಡಾಗಿದ್ದು, ಸಮುದಾಯದ ವಿರುದ್ಧ ನಡೆದ ಹಿಂಸಾತ್ಮಕ ಘಟನೆಗಳು ಭಾರತೀಯರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
76 ವರ್ಷದ ಪ್ರವೀಣ್ ರಾವ್ ಜಿ ಭಾಯ್ ಪಟೇಲ್ ಅವರು ಶೆಫೀಲ್ಡ್ ನಲ್ಲಿರುವ ಹಿಲ್ ಕ್ರೆಸ್ಟ್ ಮೋಟೆಲ್ನ ಮಾಲೀಕರಾಗಿದ್ದರು. ಕಳೆದ ವಾರ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.
ವಿಲಿಯಂ ಜೆರೆಮಿ ಮೂರ್(34) ಎಂಬಾತ ಪಟೇಲ್ ಮೇಲೆ ಗುಂಡಿನ ದಾಳಿ ನಡೆಸಿದ್ದು, ಆತನನ್ನು ಬಂಧಿಸಲಾಯಿತು. ಮೂರ್ ಕೋಣೆಯನ್ನು ಬಾಡಿಗೆಗೆ ಪಡೆಯಲು ಬಂದ ವೇಳೆ ವಾಗ್ವಾದ ನಡೆದು ಮೂರ್ ಗನ್ ತೆಗೆದು ಮೋಟೆಲ್ ಮಾಲೀಕರಿಗೆ ಗುಂಡು ಹಾರಿಸಿದರು ಎಂದು ಶೆಫೀಲ್ಡ್ ಪೊಲೀಸ್ ಮುಖ್ಯಸ್ಥ ರಿಕಿ ಟೆರ್ರಿ ಹೇಳಿದ್ದಾರೆ.
ಮೂರ್ ಅವರು 13 ನೇ ಅವೆನ್ಯೂದಲ್ಲಿ ಮನೆಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಶೆಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಅವರ ಬಳಿ ಗನ್ ಪತ್ತೆಯಾಗಿದೆ.