ಬೆಂಗಳೂರು : ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಹಾಕುವುದು ಕಡ್ಡಾಯ ಗೊಳಿಸಲಾಗಿದ್ದು, ಜೊತೆಗೆ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬುದಾಗಿ ಅದರಲ್ಲಿ ಬರೆಸಿ ಹಾಕುವಂತೆ ಸಿಎಂ ಸಿದ್ಧರಾಮಯ್ಯ ಆದೇಶಿಸಿದ್ದಾರೆ.
ಈ ಕುರಿತಂತೆ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು, ಜಗಜ್ಯೋತಿ ಬಸವೇಶ್ವರ ಎಂದು ಪ್ರಖ್ಯಾತರಾಗಿರುವ ಬಸವಣ್ಣನವರು 12ನೇ ಶತಮಾನದ ವಚನ ಚಳುವಳಿಯ ಹಾಗೂ ಸಾಮಾಜಿಕ ನ್ಯಾಯದ ನಾಯಕತ್ವ ವಹಿಸಿದ್ದರು. ಮನುಧರ್ಮಶಾಸ್ತ್ರವು ಶ್ರೇಣೀಕೃತ ಸಮಾಜವನ್ನು ನಿರ್ಮಾಣ ಮಾಡಿ ಅಸಮಾನತೆಯನ್ನು ಸೃಷ್ಟಿ ಮಾಡಿತ್ತು. ಹುಟ್ಟಿನ ಆಧಾರದ ಮೇಲೆ ಮೇಲು-ಕೀಳು ಎಂದು ಸಮುದಾಯಗಳನ್ನು ಶಾಶ್ವತವಾಗಿ ವಿಭಜಿಸಿ ಕತ್ತಲ ಕೂಪಕ್ಕೆ ತಳ್ಳಲಾಗಿತ್ತು. ದುಡಿಯುವ ವರ್ಗಗಳು ಕ್ರಿಯಾಶೀಲ ಸಮಾಜಗಳ ಸೃಜನಶೀಲ ಶಕ್ತಿಗಳಾಗಿರುತ್ತವೆ. ಆದರೆ ಜಾತಿಯ ಹೆಸರಿನಲ್ಲಿ ಈ ಸಮುದಾಯಗಳ ಚೈತನ್ಯವನ್ನ ಕಿತ್ತುಕೊಳ್ಳಲಾಗಿತ್ತು ಎಂದಿದ್ದಾರೆ.
ನಮ್ಮ ಸರ್ಕಾರವು ಬಸವಣ್ಣನವರನ್ನು ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ” ಎಂದು ಘೋಷಣೆ ಮಾಡಿದೆ. ನಮ್ಮ ನಡೆ-ನುಡಿಗಳಲ್ಲಿ ಭಿನ್ನತೆ ಇರಬಾರದು ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಹಾಕುವುದು ಕಡ್ಡಾಯ ಗೊಳಿಸಲಾಗಿದ್ದು, ಜೊತೆಗೆ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬುದಾಗಿ ಅದರಲ್ಲಿ ಬರೆಸಿ ಹಾಕುವಂತೆ ಸಿಎಂ ಸಿದ್ಧರಾಮಯ್ಯ ಆದೇಶಿಸಿದ್ದಾರೆ

