HomeKarnatakaSHOCKING NEWS: ತಾಯಿ-ಮಗಳಿಂದ ದುಡುಕಿನ ನಿರ್ಧಾರ: ನದಿಗೆ ಹಾರಿ ಇಬ್ಬರೂ ಆತ್ಮಹತ್ಯೆ

SHOCKING NEWS: ತಾಯಿ-ಮಗಳಿಂದ ದುಡುಕಿನ ನಿರ್ಧಾರ: ನದಿಗೆ ಹಾರಿ ಇಬ್ಬರೂ ಆತ್ಮಹತ್ಯೆ

ಕಲಬುರ್ಗಿ: ತಾಯಿ ಹಾಗೂ ಮಗಳು ಇಬ್ಬರೂ ಕಣಿಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಶಹಾಬಾದ್ ನಲ್ಲಿ ನಡೆದಿದೆ.

ಜೀವನದಲ್ಲಿ ಜಿಗುಪ್ಸೆಗೊಂಡು ತಾಯಿ ಹಗೂ ಮಗಳು ಇಬ್ಬರೂ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 45 ವರ್ಷದ ಸುಮಲತಾ ಹಾಗೂ ಮಗಳು 22 ವರ್ಷದ ವರ್ಷಾ ಮೃತ ದುರ್ದೈವಿಗಳು.

ಕಲಬುರ್ಗಿ ಜಿಲ್ಲೆಯ ಎಂ.ಬಿ.ನಗರ ಬಡಾವಣೆ ನಿವಾಸಿಗಳು. ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದ ತಾಯಿ ಹಾಗೂ ಮಗಳು ಈಗ ಕಣಿಗಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಬಂದಿಲ್ಲ. ಶಹಾಬಾದ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular