ಶಿವಮೊಗ್ಗ : ಅಪ್ರಾಪ್ತರಿಗೆ ಬೈಕ್ ಕೊಡಬಾರದು ಎಂದು ಅದೆಷ್ಟೇ ಬಾರಿ ಎಚ್ಚರಿಕೆ ನೀಡಿದರೂ ಕೂಡ ಪೋಷಕರು ಎಚ್ಚೆತ್ತುಕೊಂಡಿಲ್ಲ. ಅಪ್ರಾಪ್ತ ಮಗನಿಗೆ ಬೈಕ್ ನೀಡಿದ ತಾಯಿಗೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯ 30 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ನಗರದ ಕೋಟೆ ಆಂಜನೇಯ ದೇವಾಲಯದ ಬಳಿ 17 ವರ್ಷದ ಹುಡುಗನೊಬ್ಬ ಮೊಪೆಡ್ ಚಲಾಯಿಸಿಕೊಂಡು ಬಂದಿದ್ದಾನೆ. ಇದನ್ನು ಗಮನಿಸಿದ ಪಿಎಸ್ ಐ ಅಪ್ರಾಪ್ತನಿಗೆ ಬೈಕ್ ಕೊಡಬಾರದು ಎಂದು ಪೋಷಕರ ವಿರುದ್ಧ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ನಂತರ ಕೋರ್ಟ್ ಗೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದರು. ಇದೀಗ ಕೋರ್ಟ್ 30 ಸಾವಿರ ದಂಡ ವಿಧಿಸಿದೆ.