ನವದೆಹಲಿ : ಕನ್ನಡಿಗರಿಗೆ ಬೇಕು ನ್ಯಾಯಯುತ ಪಾಲು, ಘನತೆಯ ಬದುಕು ಎಂದು ದೆಹಲಿಯ ಜಂತರ್ ಮಂತರ್ ನಲ್ಲಿ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ದೇಶದಲ್ಲೇ ಅತಿ ಹೆಚ್ಚು ತೆರಿಗೆ ಕಟ್ಟುವ ಎರಡನೇ ರಾಜ್ಯ ಕರ್ನಾಟಕವಾದರೂ ಅತಿ ಹೆಚ್ಚು ಅನ್ಯಾಯವಾಗುತ್ತಿರುವುದು ನಮ್ಮ ರಾಜ್ಯಕ್ಕೆ. ಕೇಂದ್ರ ಸರ್ಕಾರದ ಅಂಕಿ ಅಂಶಗಳೇ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಕ್ಕೆ ಪುರಾವೆ ಒದಗಿಸುತ್ತವೆ. ರೂ.4,30,000 ಕೋಟಿ ನಾವು ಕನ್ನಡಿಗರು ತೆರಿಗೆ ಕಟ್ಟುತ್ತೇವೆ. ನಮಗೆ ವಾಪಾಸ್ ಬರುವುದು ಕೇವಲ ರೂ.50,000 ಕೋಟಿ ಮಾತ್ರ. ಅಂದರೆ ನಾವು ಕೊಡುವ ಪ್ರತಿ 100 ರೂ ನಲ್ಲಿ 13 ರೂ ಮಾತ್ರ ನಮಗೆ ವಾಪಾಸು ಬರ್ತಿದೆ. ಇದಕ್ಕಿಂತ ಭೀಕರ ಅನ್ಯಾಯ ಏನಿದೆ? ಈ ಅನ್ಯಾಯವನ್ನು ನಾವು ಸಹಿಸಬೇಕಾ? ಎಂದು ಸಿಎಂ ಪ್ರಶ್ನಿಸಿದ್ದಾರೆ.
ಕರುನಾಡಿಗೆ ಬರಬೇಕಾದ ನ್ಯಾಯಯುತ ಪಾಲಿಗಾಗಿ ಪ್ರತಿಭಟಿಸಿದ ಮಾತ್ರಕ್ಕೆ ನಾವು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಿದ್ದೇವೆ ಎಂದಲ್ಲ. ನಮಗೆ ಅಖಂಡ ಭಾರತದಷ್ಟೇ ಕರ್ನಾಟಕವೂ ಮುಖ್ಯ.ಇಂದು ಆರಂಭಿಸಿರುವ ಈ ಚಳವಳಿ ನ್ಯಾಯ ಸಿಗುವವರೆಗೆ ನಿರಂತರವಾಗಿರಲಿದೆ.ಜಯ ಭಾರತ ಜನನಿಯ ತನುಜಾತೆ,ಜಯಹೇ ಕರ್ನಾಟಕ ಮಾತೆ.. ಎಂದು ಹೇಳಿದ್ದಾರೆ.