alex Certify ಮಾರ್ಗಸೂಚಿ ದರ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್: ಮುದ್ರಾಂಕ ಶುಲ್ಕ ಪರಿಷ್ಕರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರ್ಗಸೂಚಿ ದರ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್: ಮುದ್ರಾಂಕ ಶುಲ್ಕ ಪರಿಷ್ಕರಣೆ

ಬೆಂಗಳೂರು: ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ನಂತರ ಸರ್ಕಾರ ಮುದ್ರಾಂಕ ಶುಲ್ಕವನ್ನು ಕೂಡ ಪರಿಷ್ಕರಣೆ ಮಾಡಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಿದ ಸಂದರ್ಭದಲ್ಲಿ ಸಹಜವಾಗಿ ನೋಂದಣಿ ಶುಲ್ಕ ಕೂಡ ಹೆಚ್ಚಳ ಆಗಿತ್ತು. ಇದೀಗ ಮುದ್ರಾಂಕ ಶುಲ್ಕವನ್ನು ಕೂಡ ಪರಿಷ್ಕರಣೆ ಮಾಡಲಾಗಿದೆ.

ಕಂದಾಯ ಇಲಾಖೆ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯ ಪತ್ರದ ಮೂಲಕ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಿಸಲಾಗಿದೆ. ದತ್ತು ಪತ್ರ. ಅಫಿಡವಿಟ್, ಒಪ್ಪಂದ, ದಾಖಲೆ ಪತ್ರ, ಕ್ರಯ ಪತ್ರ, ನೋಂದಣಿ ಸರ್ಟಿಫಿಕೇಟ್, ಹಸ್ತಾಂತರ ಪತ್ರ, ಕಂಪನಿ ಸಂಘದ ಜ್ಞಾಪನ ಪತ್ರ, ಡಿಟಿಡಿ ಪಾಲುದಾರರಿಗೆ ಮರು ರಚನೆ, ಸೀಮಿತ ಹೊಣೆಗಾರಿಕೆ, ಪಾಲುದಾರಿಕೆ ಶುಲ್ಕ ಹೆಚ್ಚಳ ಮಾಡಲಾಗಿದೆ.

ಮಾರ್ಗಸೂಚಿ ದರ ಪರಿಷ್ಕರಣೆ, ಮುದ್ರಾಂಕ ಶುಲ್ಕ ಏರಿಕೆಯಿಂದ ಜನತೆಗೆ ಹೊರೆಯಾಗಲಿದೆ. ಆಸ್ತಿ ಖರೀದಿ, ಕಟ್ಟಡ ನಿರ್ಮಾಣ 10 ಲಕ್ಷ ರೂ.ವರೆಗೆಇನ ಡಿಟಿಡಿಗೆ ಶೇ. 0.1 ರಷ್ಟು ಇದ್ದ ಮುದ್ರಾಂಕ ಶುಲ್ಕವನ್ನು ಶೇ. 0.5 ರಷ್ಟು ಏರಿಕೆ ಮಾಡಲಾಗಿದೆ.

10 ಲಕ್ಷ ರೂ. ಮೇಲ್ಪಟ್ಟು ಶೇಕಡ 0.2ರಷ್ಟು ರಿಂದ ಶೇಕಡ 0.5 ರಷ್ಟು, ಸ್ವಾಧೀನ ರಹಿತ ಕರಾರು ಪತ್ರ ಶೇಕಡ 0.1 ರಿಂದ 0.5 ರಷ್ಟು, ವಿಲ್ 500 ರೂ.ನಿಂದ ಒಂದು ಸಾವಿರ ರೂ., ಪ್ರಮಾಣ ಪತ್ರ 20 ರೂ. ನಿಂದ 100 ರೂ., ಪವರ್ ಆಫ್ ಅಟಾರ್ನಿ 100 ರೂ.ನಿಂದ 500 ರೂಪಾಯಿಗೆ ಹೆಚ್ಚಳವಾಗಿದೆ.

ವಿಭಾಗ ಪತ್ರ ನೋಂದಣಿಗೂ ಮುದ್ರಾಂಕ ಶುಲ್ಕ ಏರಿಕೆ ಮಾಡಲಾಗಿದೆ. ನಗರಸಭೆ, ಪುರಸಭೆ ವ್ಯಾಪ್ತಿಯ ಆಸ್ತಿ ವಿಭಾಗ ಪತ್ರ ನೋಂದಣಿಗೆ ಒಂದು ಸಾವಿರ ರೂಪಾಯಿಯಿಂದ 5000 ರೂ.ಗೆ ಏರಿಕೆ ಮಾಡಲಾಗಿದೆ. ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಆಸ್ತಿಗೆ 500 ರೂ.ನಿಂದ 3000ರೂ., ಕೃಷಿ ಭೂಮಿಗೆ 250 ರೂ.ನಿಂದ ಒಂದು ಸಾವಿರ ರೂಪಾಯಿ, ಚರಾಸ್ತಿ ನೋಂದಣಿಗೆ 250 ರೂ.ನಿಂದ ಒಂದು ಸಾವಿರ ರೂಪಾಯಿ, ಪಾಲುದಾರಿಕೆ ನೋಂದಣಿಗೆ ಮುದ್ರಾಂಕ ಶುಲ್ಕ ಶೇಕಡ 3ರಿಂದ ಶೇಕಡ 5ರಷ್ಟು ಹೆಚ್ಚಳ ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...