ಭಾರತದಲ್ಲಿ ಬೈಕ್ ಪ್ರಿಯರ ಕೊರತೆಯೇನಿಲ್ಲ. ಅನೇಕರು ಪ್ರತಿನಿತ್ಯ ಸಂಚಾರಕ್ಕೆ ಬೈಕ್ ಅನ್ನೇ ಅವಲಂಬಿಸಿದ್ದಾರೆ. ಪ್ರತಿದಿನ ಬೈಕ್ ಓಡಿಸಿದರೆ ಅದಕ್ಕೆ ತಕ್ಕಂತೆ ವಾಹನದ ನಿರ್ವಹಣೆ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸರಿಯಾದ ಸಮಯಕ್ಕೆ ಬೈಕ್ ಸರ್ವಿಸ್ ಮಾಡಿದರೂ ಹಲವು ಭಾಗಗಳನ್ನು ಬದಲಾಯಿಸಬೇಕಾಗಿ ಬರುತ್ತದೆ. ಹಾಗಾಗಿ ಬೈಕ್ ಸರ್ವೀಸ್ ಮಾಡಿಸುವುದು ಬಹಳ ದುಬಾರಿ ಎನಿಸುತ್ತದೆ.
ಈ ರೀತಿ ಬೈಕ್‌ನ ಬಿಡಿಭಾಗಗಳು ಆಗಾಗ ಹಾಳಾಗುವುದು ಏಕೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಇದಕ್ಕೆ ಪ್ರಮುಖ ಕಾರಣ ನಿರ್ವಹಣೆಯ ಕೊರತೆ. ಬೈಕ್‌ನ ಯಾವ್ಯಾವ ಬಿಡಿ ಭಾಗಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದುದನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಮಾಡಿ.
ಎಂಜಿನ್ ಆಯಿಲ್ : ಎಂಜಿನ್ ಆಯಿಲ್ ಅನ್ನು ಪ್ರತಿ 3000-5000 ಕಿಮೀಗೊಮ್ಮೆ ಬದಲಾಯಿಸಬೇಕು.
ಏರ್ ಫಿಲ್ಟರ್: ಪ್ರತಿ 2000 ಕಿ.ಮೀಟರ್‌ಗಳಿಗೊಮ್ಮೆ ಏರ್ ಫಿಲ್ಟರ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.
ಚೈನ್ ಮತ್ತು ಸ್ಪ್ರಾಕೆಟ್: ಸರಪಳಿಯನ್ನು ನಯಗೊಳಿಸಿ ಮತ್ತು ಸ್ಪ್ರಾಕೆಟ್ ಅನ್ನು ಸಮಯೋಚಿತವಾಗಿ ಪ್ರತಿ 10,000-15,000 ಕಿಮೀಗಳಿಗೊಮ್ಮೆ ಬದಲಾಯಿಸಿ.
ಬ್ರೇಕ್ ಪ್ಯಾಡ್‌ಗಳು: ಬ್ರೇಕ್ ಪ್ಯಾಡ್‌ಗಳ ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸಬೇಕು. ಪ್ರತಿ 10,000-15,000 ಕಿಮೀಗಳಿಗೊಮ್ಮೆ ಬದಲಾಯಿಸುವುದು ಉತ್ತಮ.
ಟೈರುಗಳು: ಟೈರ್ ಗಾಳಿಯ ಒತ್ತಡವನ್ನು ಆಗಾಗ ಚೆಕ್ ಮಾಡಿಕೊಳ್ಳಿ. ಪ್ರತಿ 15,000-20,000 ಕಿಮೀಗಳಿಗೊಮ್ಮೆ ಟೈರ್ ಬದಲಾಯಿಸಿ.
ಬ್ಯಾಟರಿ: ಬ್ಯಾಟರಿ ಟರ್ಮಿನಲ್‌ಗಳನ್ನು ಸ್ವಚ್ಛವಾಗಿಡಿ ಮತ್ತು ಬ್ಯಾಟರಿಯನ್ನು ಸಮಯಕ್ಕೆ ಬದಲಾಯಿಸಿ, ಕನಿಷ್ಠ 2-3 ವರ್ಷಗಳಿಗೊಮ್ಮೆ ಬದಲು ಮಾಡಬೇಕು.
ಸ್ಪಾರ್ಕ್ ಪ್ಲಗ್: ಸ್ಪಾರ್ಕ್ ಪ್ಲಗ್ ಅನ್ನು ಪ್ರತಿ 10,000-15,000 ಕಿಮೀಗಳಿಗೆ ಬದಲಾಯಿಸಬೇಕು.
ಏರ್ ಫಿಲ್ಟರ್: ಏರ್ ಫಿಲ್ಟರ್ ಅನ್ನು ಪ್ರತಿ 2000 ಕಿ.ಮೀಗಳಿಗೆ ಬದಲಾಯಿಸುವುದು ಉತ್ತಮ.
ಆಯಿಲ್ ಫಿಲ್ಟರ್: ಇಂಧನ ಫಿಲ್ಟರ್ ಅನ್ನು ಕೂಡ ಪ್ರತಿ 10,000-15,000 ಕಿಮೀಗಳಿಗೆ ಬದಲಾವಣೆ ಮಾಡಬೇಕು.
ಕ್ಲಚ್ ಪ್ಲೇಟ್‌ಗಳು: ಕ್ಲಚ್ ಪ್ಲೇಟ್‌ಗಳನ್ನು ಪ್ರತಿ 20,000-25,000 ಕಿಮೀಗಳಿಗೆ ಬದಲಾವಣೆ ಮಾಡಿ.
ಇದಲ್ಲದೆ ಬೈಕ್ ಅನ್ನು ಧೂಳು, ಮಣ್ಣು ಮತ್ತು ನೀರಿನಿಂದ ರಕ್ಷಿಸಿ. ನಿಯಮಿತವಾಗಿ ಬೈಕನ್ನು ತೊಳೆಯಿರಿ ಮತ್ತು ನಯಗೊಳಿಸಿ. ಬೈಕ್ ಓವರ್ ಲೋಡ್ ಮಾಡಬೇಡಿ. ಅತಿಯಾದ ವೇಗದಲ್ಲಿ ಬೈಕ್ ಓಡಿಸಬೇಡಿ. ನಿಯಮಿತವಾಗಿ ಬೈಕ್ ಸರ್ವಿಸ್ ಮಾಡಿಸಬೇಕು. ಈ ಎಲ್ಲಾ ಸಲಹೆಗಳನ್ನು ಅನುಸರಿಸಿದರೆ ಸರ್ವೀಸ್‌ಗೆ ಹೆಚ್ಚು ಹಣ ಖರ್ಚಾಗುವುದಿಲ್ಲ.