HomeKarnatakaSHOCKING NEWS: 12 ವರ್ಷಗಳ ಕಾಲ ಪತ್ನಿಯನ್ನು ಗೃಹ ಬಂಧನದಲ್ಲಿಟ್ಟಿದ್ದ ಪತಿ; ಮೈಸೂರಿನಲ್ಲಿ ಅಮಾನವೀಯ ಕೃತ್ಯ...

SHOCKING NEWS: 12 ವರ್ಷಗಳ ಕಾಲ ಪತ್ನಿಯನ್ನು ಗೃಹ ಬಂಧನದಲ್ಲಿಟ್ಟಿದ್ದ ಪತಿ; ಮೈಸೂರಿನಲ್ಲಿ ಅಮಾನವೀಯ ಕೃತ್ಯ ಬೆಳಕಿಗೆ

ಮೈಸೂರು: ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಬರೋಬ್ಬರಿ 12 ವರ್ಷಗಳ ಕಾಲ ಗೃಹ ಬಂಧನದಲ್ಲಿ ಇರಿಸಿದ್ದ ಘಟನೆ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ನಡೆದಿದೆ.

12 ವರ್ಷಗಳ ಬಳಿಕ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದ್ದು, ಆರೋಪಿ ಸಣ್ಣಾಲಯ್ಯ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಣ್ಣಾಲಯ್ಯ ತನ್ನ ಪತ್ನಿ ಸುಮಾ ಮೇಲಿನ ಅನುಮಾನಕ್ಕೆ ಆಕೆ ಶೀಲ ಶಂಕಿಸಿ 12 ವರ್ಷಗಳಿಂದ ಆಕೆಯನ್ನು ಗೃಹಬಂಧನದಲ್ಲಿ ಇಟ್ಟಿದ್ದಾನೆ.

ಸುಮಾಳನ್ನು 12 ವರ್ಷಗಳ ಹಿಂದೆ ಸಣ್ಣಾಲಯ್ಯ ಮೂರನೇ ಮದುವೆಯಾಗಿದ್ದ. ಮದುವೆ ದಿನದಿಂದಲೇ ಪತ್ನಿಯ ಮೇಲೆ ಅನುಮಾನ ಪಡಲು ಶುರುಮಾಡಿದ್ದ. ಒಂದು ದಿನವೂ ಪತ್ನಿಗೆ ನೆಮ್ಮದಿಯಿಂದ ಬದುಕಲು ಬಿಟ್ಟಿಲ್ಲ. ಸುಖ ಸಂಸಾರವನ್ನೂ ಮಾಡಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

12 ವರ್ಷಗಳ ಬಳಿಕ ಸುಮಾ ಬಂಧನ ಮುಕ್ತಳಾಗಿದ್ದು, ಹೆಚ್.ಡಿ.ಕೋಟೆ ಪೊಲೀಸರು ಆರೋಪಿ ಪತಿ ಸಣ್ಣಾಲಯ್ಯನನ್ನು ವಶಕ್ಕೆ ಪಡೆದಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular