HomeKarnatakaBIG NEWS: ಮೈಸೂರು ಏರ್ ಪೋರ್ಟ್ ಬಳಿ ಕಾರು ಡಿಕ್ಕಿ; ಹುಲಿ ಸಾವು

BIG NEWS: ಮೈಸೂರು ಏರ್ ಪೋರ್ಟ್ ಬಳಿ ಕಾರು ಡಿಕ್ಕಿ; ಹುಲಿ ಸಾವು

ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಕಾರು ಡಿಕ್ಕಿಯಾಗಿ ಹುಲಿಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.

ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರೊಂದು ಹುಲಿಗೆ ಡಿಕ್ಕಿ ಹೊಡೆದಿದ್ದು, 18 ತಿಂಗಳ ಹುಲಿ ಸ್ಥಳದಲ್ಲೇ ಸಾವನ್ನಪ್ಪಿದೆ. ಕೆಲ ತಿಂಗಳ ಹಿಂದಷ್ಟೇ ತನ್ನ ತಾಯಿಯೊಂದಿಗೆ ಕಾಣಿಸಿಕೊಂಡಿದ್ದ ನಾಲ್ಕು ಮರಿಗಳಲ್ಲಿ ಈ ಹುಲಿ ಕೂಡ ಒಂದಾಗಿತ್ತು.

ಮೃತ ಹುಲಿಯನ್ನು ಅರಣ್ಯ ಇಲಾಖೆಯು ‘ಟಿ6’ ಎಂದು ಗುರುತಿಸಿದೆ. ಎರಡು ದಿನಗಳ ಹಿಂದಷ್ಟೇ ಸಿಂಧುವಳ್ಳಿ-ಬ್ಯಾಟಳ್ಳಿ ಪ್ರದೇಶದಲ್ಲಿ ಕ್ಯಾಮರಾ ಟ್ರ್ಯಾಪ್ ನಲ್ಲಿ ಪತ್ತೆಯಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರು ಡಿಕ್ಕಿಯಾಗಿ ಹುಲಿ ಸಾವು ಪ್ರಕರಣ ಸಂಬಂಧ ಪೊಇಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular