![](https://kannadadunia.com/wp-content/uploads/2017/11/cm-si.jpg)
ಬೆಂಗಳೂರು : ಇಂದು ಗಾಂಧೀಜಿಯ ಚಿಂತನೆಗಳನ್ನು ಹತ್ಯೆಗೈಯಲು ನೂರಾರು ಗೋಡ್ಸೆಗಳು ಹುಟ್ಟಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಿಎಂ ಸಿದ್ದರಾಮಯ್ಯ, ಅಂದು ಮಹಾತ್ಮ ಗಾಂಧೀಜಿಯನ್ನು ಕೊಲ್ಲಲು ಒಬ್ಬ ಗೋಡ್ಸೆ ಹುಟ್ಟಿಕೊಂಡಿದ್ದ, ಇಂದು ಗಾಂಧೀಜಿಯ ಚಿಂತನೆಗಳನ್ನು ಹತ್ಯೆಗೈಯಲು ನೂರಾರು ಗೋಡ್ಸೆಗಳು ಹುಟ್ಟಿಕೊಂಡಿದ್ದಾರೆ.ಗಾಂಧಿಯನ್ನು ಉಳಿಸಿಕೊಳ್ಳೋಣ ಎಂದು ಹೇಳಿದ್ದಾರೆ.
ಕೋಮು ಸೌಹಾರ್ದತೆಗಾಗಿ ಹೋರಾಡುತ್ತಲೇ ಜೀವವನ್ನು ಬಲಿದಾನಗೈದ ಮಹಾತ್ಮ ಗಾಂಧೀಜಿ ಬದುಕಿನಲ್ಲಿ ಮಾತ್ರವಲ್ಲ ಸಾವಿನಲ್ಲಿಯೂ ಹೇಳಿಹೋಗಿರುವ ಪಾಠವನ್ನು ಮರೆಯದಿರೋಣ. ಗಾಂಧೀಜಿ ಎಂಬ ಜಗದ್ಗರುವಿನ ತತ್ವಾದರ್ಶಗಳ ಪಾಲನೆ, ಪೋಷಣೆ ನಮ್ಮ ಗುರಿಯಾಗಿರಲಿ. ರಾಷ್ಟ್ರಪಿತನಿಗೆ ಮತ್ತು ಅವರಂತೆಯೇ ದೇಶಕ್ಕಾಗಿ ಬಲಿದಾನಗೈದ ಸಾವಿರಾರು ಹುತಾತ್ಮರಿಗೆ ಗೌರವದ ಶ್ರದ್ಧಾಂಜಲಿ ಎಂದು ತಿಳಿಸಿದ್ದಾರೆ.