HomeIndiaರಕ್ಷಣಾ ಸಾಮಗ್ರಿ ರಫ್ತು: ಇದೇ ಮೊದಲ ಬಾರಿಗೆ ವಿಶ್ವದ 25 ದೇಶಗಳನ್ನು ಹಿಂದಿಕ್ಕಿ ಭಾರತಕ್ಕೆ ಅಗ್ರಸ್ಥಾನ

ರಕ್ಷಣಾ ಸಾಮಗ್ರಿ ರಫ್ತು: ಇದೇ ಮೊದಲ ಬಾರಿಗೆ ವಿಶ್ವದ 25 ದೇಶಗಳನ್ನು ಹಿಂದಿಕ್ಕಿ ಭಾರತಕ್ಕೆ ಅಗ್ರಸ್ಥಾನ

ನಾಗಪುರ: ಭಾರತವು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುತ್ತಿದೆ ಮತ್ತು ಮೊದಲ ಬಾರಿಗೆ ರಕ್ಷಣಾ ರಫ್ತಿನಲ್ಲಿ ಅಗ್ರ 25 ದೇಶಗಳಲ್ಲಿ ಅಗ್ರ ಸ್ಥಾನದಲ್ಲಿದೆ ಎಂದು ಕೇಂದ್ರರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಭಾನುವಾರ ಹೇಳಿದ್ದಾರೆ.

ನಾಗ್ಪುರದಲ್ಲಿ ನಡೆದ ಅಡ್ವಾಂಟೇಜ್ ವಿದರ್ಭ ಕಾರ್ಯಕ್ರಮದಲ್ಲಿ ರು ಮಾತನಾಡುತ್ತಿದ್ದ ಅವರು, ಸರ್ಕಾರವು 4,666 ರಕ್ಷಣಾ ಘಟಕಗಳ ನಾಲ್ಕು ಪಟ್ಟಿಗಳನ್ನು ಬಿಡುಗಡೆ ಮಾಡಿ ಆಮದನ್ನು ನಿಷೇಧಿಸಲಾಗಿದೆ. ಇದರಿಂದಾಗಿ ಭಾರಿ ಉಳಿತಾಯವಾಗಿದೆ ಎಂದರು.

ಭಾರತವು ಮೊದಲ ಬಾರಿಗೆ ರಕ್ಷಣಾ ರಫ್ತಿನಲ್ಲಿ ಅಗ್ರ 25 ದೇಶಗಳ ಗುಂಪನ್ನು ಮುನ್ನಡೆಸುತ್ತಿದೆ. ಏಕೆಂದರೆ ಅದು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುತ್ತಿದೆ. ರಕ್ಷಣಾ ರಫ್ತು 2017-18ರಲ್ಲಿ 4,682 ಕೋಟಿ ರೂ.ಗಳಿಂದ 2022-23ರಲ್ಲಿ 15,916 ಕೋಟಿ ರೂ.ಗೆ ಏರಿಕೆಯಾಗಿದೆ. ಡಿಸೆಂಬರ್ 2023ರವರೆಗೆ ಸುಮಾರು 9,428 ಕೋಟಿ ರೂ.ಗಳಾಗಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರ್ಡಿನೆನ್ಸ್ ಕಾರ್ಖಾನೆಗಳು ವಿಕೇಂದ್ರೀಕರಣಗೊಂಡ ನಂತರ ಬಹುತೇಕ ಎಲ್ಲಾ ರಕ್ಷಣಾ ಪಿಎಸ್‌ಯುಗಳು ಲಾಭದಲ್ಲಿವೆ. ರಕ್ಷಣಾ ಸಚಿವಾಲಯವು ನಾವೀನ್ಯತೆ ಮತ್ತು ತಂತ್ರಜ್ಞಾನವನ್ನು ಉತ್ತೇಜಿಸುತ್ತಿದೆ ಎಂದು ಅವರು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular