ಕ್ರಿಕೆಟ್ ಆಡುವಾಗ ಯುವಕನೊಬ್ಬ ಕುಸಿದು ಬಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.
ನಗರದ ಮೊಹಲ್ಲಾ ವಿವೇಕ್ ವಿಹಾರ್ ನಿವಾಸಿ, ಬುಲಿಯನ್ ವ್ಯಾಪಾರಿಯ 28 ವರ್ಷದ ಮಗ ಶನಿವಾರ ಹೃದಯಾಘಾತದಿಂದ ನಿಧನರಾದರು. ಅವರು ಬೆಳಿಗ್ಗೆ ತಮ್ಮ ತಂಡದ ಸದಸ್ಯರೊಂದಿಗೆ ಕ್ರಿಕೆಟ್ ಆಡಲು ಹೋಗಿದ್ದರು.
ನಗರದ ಟಂಕಿ ರಸ್ತೆಯ ವಿವೇಕ್ ವಿಹಾರ್ ನಿವಾಸಿ ಬುಲಿಯನ್ ವ್ಯಾಪಾರಿ ಸುಖ್ಮಲ್ ವರ್ಮಾ ಅವರ ಪುತ್ರ ಕುಲದೀಪ್ ಶನಿವಾರ ಬೆಳಿಗ್ಗೆ ವಿವಿ ಪಿಜಿ ಕಾಲೇಜು ಮೈದಾನದಲ್ಲಿ ತನ್ನ ಸಹೋದ್ಯೋಗಿಗಳೊಂದಿಗೆ ಕ್ರಿಕೆಟ್ ಆಡಲು ತೆರಳಿದ್ದರು. ಅವರು ಆಗಷ್ಟೇ ಕ್ರಿಕೆಟ್ ಆಡಲು ಪ್ರಾರಂಭಿಸಿದ್ದರು, ಬೌಲಿಂಗ್ ಮಾಡುವಾಗ ಕುಲ್ದೀಪ್ ನೆಲದ ಮೇಲೆ ಕುಸಿದು ಬಿದ್ದರು. ಕೂಡಲೇ ಸಹ ಆಟಗಾರರು ಕುಲದೀಪ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ವೈದ್ಯರು ಯುವಕ ಮೃತಪಟ್ಟಿದಾನೆ ಎಂದು ಘೋಷಿಸಿದ್ದಾರೆ.