HomeLatest NewsBREAKING : ʻFIHʼ ಮಹಿಳಾ ಹಾಕಿ ವಿಶ್ವಕಪ್: ದಕ್ಷಿಣ ಆಫ್ರಿಕಾ ವಿರುದ್ಧ 6-3 ಗೆದ್ದ...

BREAKING : ʻFIHʼ ಮಹಿಳಾ ಹಾಕಿ ವಿಶ್ವಕಪ್: ದಕ್ಷಿಣ ಆಫ್ರಿಕಾ ವಿರುದ್ಧ 6-3 ಗೆದ್ದ ಭಾರತ, ಫೈನಲ್ ಗೆ ಪ್ರವೇಶ

ಎಫ್ಐಎಚ್ ಮಹಿಳಾ ಹಾಕಿ 5 ರ ಮಹಿಳಾ ವಿಶ್ವಕಪ್‌ ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 6-3 ಗೋಲುಗಳಿಂದ ರೋಚಕವಾಗಿ ಸೋಲಿಸಿ ಫೈನಲ್ ಗೆ  ಪ್ರವೇಶಿಸಿತು.

ಭಾರತದ ಪರ ಅಕ್ಷತಾ ಅಬಾಸೊ ಧೇಕಲೆ (7ನೇ ನಿಮಿಷ), ಮರಿಯಾನಾ ಕುಜುರ್ (11ನೇ ನಿಮಿಷ), ಮುಮ್ತಾಜ್ ಖಾನ್ (21ನೇ ನಿಮಿಷ), ರುತುಜಾ ದಾದಾಸೊ ಪಿಸಾಲ್ (23ನೇ ನಿಮಿಷ), ಜ್ಯೋತಿ ಛತ್ರಿ (25ನೇ ನಿಮಿಷ) ಮತ್ತು ಅಜಿಮಾ ಕುಜುರ್ (26ನೇ ನಿಮಿಷ) ಗೋಲು ಗಳಿಸಿದರು.

ದಕ್ಷಿಣ ಆಫ್ರಿಕಾ ಪರ ಟೆಶಾನ್ ಡಿ ಲಾ ರೇ (5ನೇ ನಿ.), ನಾಯಕ ಟೋನಿ ಮಾರ್ಕ್ಸ್ (8ನೇ ನಿ.) ಮತ್ತು ಡಿರ್ಕಿ ಚೇಂಬರ್ಲಿನ್ (29ನೇ ನಿ.) ಗೋಲು ಗಳಿಸಿದರು.ಭಾನುವಾರ ನಡೆಯಲಿರುವ ಫೈನಲ್ನಲ್ಲಿ ಭಾರತ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular