HomeKarnatakaರಾಮನಗರದಲ್ಲಿ ತೀವ್ರತೆ ಪಡೆದ ರಾಮ ಮಂದಿರ ನಿರ್ಮಾಣ ವಿಚಾರ: ಅಯೋಧ್ಯೆ ವಿಗ್ರಹ ನೀಡಲು ಪತ್ರ

ರಾಮನಗರದಲ್ಲಿ ತೀವ್ರತೆ ಪಡೆದ ರಾಮ ಮಂದಿರ ನಿರ್ಮಾಣ ವಿಚಾರ: ಅಯೋಧ್ಯೆ ವಿಗ್ರಹ ನೀಡಲು ಪತ್ರ

ರಾಮನಗರ: ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ವಿಚಾರ ತೀವ್ರತೆ ಪಡೆದುಕೊಂಡಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶಿಲ್ಪಿಗಳು ರಾಮಮಂದಿರಕ್ಕಾಗಿ ಮೂರು ವಿಗ್ರಹಗಳನ್ನು ಕೆತ್ತಿದ್ದು, ಅವುಗಳಲ್ಲಿ ಗಣೇಶ ಭಟ್ ಅವರು ಕೆತ್ತಿರುವ ರಾಮನ ವಿಗ್ರಹ ನೀಡುವಂತೆ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಗೆ ಪತ್ರ ಬರೆಯುವುದಾಗಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ.

ಶಿಲ್ಪಿಗಳಿಗೆ ಕರೆ ಮಾಡಿ ಜಿಲ್ಲೆಯ ಪರವಾಗಿ ಶುಭಾಶಯ ತಿಳಿಸಿದ್ದೇನೆ. ದೇವರಿಗಿಂತ ದೊಡ್ಡದು ಯಾವುದೂ ಇಲ್ಲ. ಈ ಬಾರಿ ಬಜೆಟ್ ನಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುದಾನ ನೀಡುವಂತೆ ಬೇಡಿಕೆ ಇಟ್ಟಿದ್ದೇನೆ. ಪ್ರವಾಸೋದ್ಯಮ ಇಲಾಖೆಗೂ ಸಹ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular