HomeKarnatakaತರಾತುರಿಯಲ್ಲಿ ನಮ್ಮ ಪಕ್ಷ ತೊರೆದಿರುವುದು ಶೆಟ್ಟರ್ ಘನತೆಗೆ ಶೋಭೆ ತರುವುದಿಲ್ಲ : ಸಚಿವ ಎಂ.ಬಿ ಪಾಟೀಲ್

ತರಾತುರಿಯಲ್ಲಿ ನಮ್ಮ ಪಕ್ಷ ತೊರೆದಿರುವುದು ಶೆಟ್ಟರ್ ಘನತೆಗೆ ಶೋಭೆ ತರುವುದಿಲ್ಲ : ಸಚಿವ ಎಂ.ಬಿ ಪಾಟೀಲ್

ಬೆಂಗಳೂರು : ತರಾತುರಿಯಲ್ಲಿ ನಮ್ಮ ಪಕ್ಷ ತೊರೆದಿರುವುದು ಜಗದೀಶ್ ಶೆಟ್ಟರ್ ಘನತೆಗೆ ಶೋಭೆ ತರುವುದಿಲ್ಲ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದರು.

ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಾದ ಕುರಿತು ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದರು.
ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ತೊರೆದಿದ್ದು ದುಃಖಕರ . ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಅವರದ್ದೇ ಮತ ಕ್ಷೇತ್ರದಲ್ಲಿ ಟಿಕೆಟ್ ನೀಡದೆ ವಂಚನೆ ಮಾಡಿತ್ತು. ಆ ವೇಳೆ ಕಾಂಗ್ರೆಸ್ ಪಕ್ಷ ಅವರನ್ನು ಬರ ಮಾಡಿಕೊಂಡು, ಟಿಕೆಟ್ ನೀಡಿ ಗೌರವಿಸಿತ್ತು. ಅವರು ಚುನಾವಣೆಯಲ್ಲಿ ಪರಾಭವಗೊಂಡರು ಅವರನ್ನು ವಿಧಾನಪರಿಷತ್ತಿನ ಸದಸ್ಯರನ್ನಾಗಿ ಮಾಡಿದ್ದೆವು. ಈಗ ತರಾತುರಿಯಲ್ಲಿ ನಮ್ಮ ಪಕ್ಷ ತೊರೆದಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ! ಎಂದಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular