ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನ ನವದೆಹಲಿಯಲ್ಲಿ ಭೇಟಿ ಮಾಡಿದ ಮಾಜಿ ಸಚಿವ ಡಾ.ಕೆ. ಸುಧಾಕರ್ ಅವರು ಸಮಾಲೋಚನೆ ನಡೆಸಿದ್ದಾರೆ.
ಭೇಟಿ ವೇಳೆ ರಾಜ್ಯ ರಾಜಕಾರಣದ ವಿದ್ಯಮಾನಗಳು, ರಾಮ ಮಂದಿರದ ಉದ್ಘಾಟನೆಯ ವೇಳೆ ಕರ್ನಾಟಕದಾದ್ಯಂತ ಮನೆ ಮಾಡಿದ್ದ ಹಬ್ಬದ ವಾತಾವರಣ, ಕನ್ನಡಿಗರ ಸಂಭ್ರಮಾಚರಣೆ ಸೇರಿದಂತೆ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ತಾವು ನಂಬಿರುವ ವಿಚಾರಧಾರೆ ಬಗ್ಗೆ ಅವರಿಗಿರುವ ಸ್ಪಷ್ಟತೆ ಮತ್ತು ಬದ್ಧತೆ, ಸಂಘಟನೆಗಾಗಿ ತಮ್ಮ ಇಡೀ ಜೀವನವನ್ನೇ ಸಮರ್ಪಿಸಿಕೊಂಡಿರುವ ಅವರ ನಿಸ್ವಾರ್ಥ ಸೇವಾ ಮನೋಭಾವನೆ, ಕಾರ್ಯಕರ್ತರ ಸಾಮರ್ಥ್ಯ ಮತ್ತು ಶಕ್ತಿ ಗುರುತಿಸಿ ಅವರನ್ನು ರಾಷ್ಟ್ರ ನಿರ್ಮಾಣದ ಕೆಲಸಕ್ಕೆ ಜೋಡಿಸುವ ಸಂಘಟನಾ ಚಾತುರ್ಯ, ಸಂಘಟನೆಯಲ್ಲಿ ತೊಡಗಿಸಿಕೊಂಡ ಕಾರ್ಯಕರ್ತರ ಎಲ್ಲಾ ಏಳು-ಬೀಳುಗಳಲ್ಲೂ ಸದಾ ಅವರ ಬೆನ್ನಿಗೆ ನಿಂತು ಪ್ರೇರೇಪಣೆ ನೀಡುವ ನಾಯಕತ್ವ ಗುಣ, ಇವೆಲ್ಲವನ್ನು ಸಂತೋಷ್ ಜೀ ಅವರಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಸುಧಾಕರ್ ತಿಳಿಸಿದ್ದಾರೆ.