HomeEntertainmentನಟಿ ಸ್ವಾತಿಷ್ಠ ಅವರ ಪಾತ್ರದ ಪರಿಚಯ ಮಾಡಿಸಿದ 'ಒಂದು ಸರಳ ಪ್ರೇಮ ಕಥೆ' ಚಿತ್ರತಂಡ

ನಟಿ ಸ್ವಾತಿಷ್ಠ ಅವರ ಪಾತ್ರದ ಪರಿಚಯ ಮಾಡಿಸಿದ ‘ಒಂದು ಸರಳ ಪ್ರೇಮ ಕಥೆ’ ಚಿತ್ರತಂಡ

ವಿನಯ್ ರಾಜಕುಮಾರ್ ಅಭಿನಯದ ಬಹು ನಿರೀಕ್ಷಿತ ”ಒಂದು ಸರಳ ಪ್ರೇಮ ಕಥೆ” ಚಿತ್ರ ಮುಂದಿನ ತಿಂಗಳು ಫೆಬ್ರವರಿ 8ರಂದು ರಾಜ್ಯದಾದ್ಯಂತ ತೆರೆ ಮೇಲೆ ಬರಲಿದ್ದು, ಸಿನಿಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

ಒಂದು ಸರಳ ಪ್ರೇಮ ಕಥೆ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಅಭಿನಯಿಸಿದ್ದು, ನಟಿ ಸ್ವಾತಿಷ್ಟ ಅವರ ಪಾತ್ರವನ್ನು ಚಿತ್ರತಂಡ ವಿಡಿಯೋ ಮೂಲಕ ಇಂದು ರಿವಿಲ್ ಮಾಡಿದೆ. ಅನುರಾಗ ಎಂಬ ಹುಡುಗಿಯ ಪಾತ್ರದಲ್ಲಿ ನಟಿ ಸ್ವಾತಿಷ್ಟ  ಕಾಣಿಸಿಕೊಳ್ಳಲಿದ್ದು, ಈ ಕ್ಯಾರೆಕ್ಟರ್ ಟೀಸರ್ ಅನ್ನು ಖ್ಯಾತ ನಟ ವಿಜಯ್ ಸೇತುಪತಿ  ಬಿಡುಗಡೆಗೊಳಿಸಿದ್ದಾರೆ.

ರಾಮ್ ಮೂವೀಸ್ ಬ್ಯಾನರ್, ಮೈಸೂರು ರಮೇಶ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ವಿನಯ್ ರಾಜಕುಮಾರ್, ಮಲ್ಲಿಕಾಸಿಂಗ್ ಮತ್ತು ಸ್ವಾತಿಷ್ಟ ಮುಖ್ಯ ಭೂಮಿಕೆಯಲ್ಲಿದ್ದು, ವೀರ್ ಸಮರ್ಥ್ ಸಂಗೀತ ಸಂಯೋಜನೆ ನೀಡಿದ್ದಾರೆ. ಆದಿ ಸಂಕಲನ ಮತ್ತು ಕಾರ್ತಿಕ್ ಶರ್ಮ ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular