HomeLatest Newsಸಂಗಾತಿಯೊಂದಿಗೆ ʼಹನಿಮೂನ್‌ʼ ಗೆ ತೆರಳುವ ವೇಳೆ ಈ ತಪ್ಪು ಮಾಡಬೇಡಿ…!

ಸಂಗಾತಿಯೊಂದಿಗೆ ʼಹನಿಮೂನ್‌ʼ ಗೆ ತೆರಳುವ ವೇಳೆ ಈ ತಪ್ಪು ಮಾಡಬೇಡಿ…!

ಪ್ರೇಮವಿರಲಿ ಅಥವಾ ದಾಂಪತ್ಯವಿರಲಿ ಹೊಸದರಲ್ಲಿ ಎಲ್ಲವೂ ಚೆನ್ನಾಗಿರುತ್ತವೆ. ಈ ಸಮಯವನ್ನು ಜೀವನದ ಅತ್ಯುತ್ತಮ ಕ್ಷಣಗಳೆಂದೇ ಎಲ್ಲರೂ ಭಾವಿಸುತ್ತಾರೆ. ಹಾಗಾಗಿ ಅದನ್ನು ಸುಂದರವಾಗಿ ಕಳೆಯಬೇಕೆಂದು ಬಯಸುತ್ತಾರೆ. ಅದಕ್ಕಾಗಿಯೇ ದೂರದೂರಿಗೆ ಪ್ರವಾಸ ಅಥವಾ ಹನಿಮೂನ್‌ಗೆ ತೆರಳುವುದು ಸಾಮಾನ್ಯ. ಆದರೆ ಅನುಭವದ ಕೊರತೆಯಿಂದಾಗಿ ಅನೇಕ ಬಾರಿ ದಂಪತಿಗಳ ಮೋಜನ್ನೇ ಹಾಳು ಮಾಡುವಂತಹ ತಪ್ಪುಗಳು ನಡೆದುಹೋಗುತ್ತವೆ. ನಂತರ ವಿಷಾದ ಪಡುವ ಬದಲು ಮೊದಲೇ ಅವುಗಳ ಬಗ್ಗೆ ತಿಳಿದುಕೊಂಡು ಎಚ್ಚರಿಕೆ ವಹಿಸಬೇಕು.

ಪ್ರಯಾಣದ ಹಿತಾಸಕ್ತಿ – ಪ್ರತಿಯೊಬ್ಬ ವ್ಯಕ್ತಿ ವಿಭಿನ್ನ ಆದ್ಯತೆಗಳನ್ನು ಹೊಂದಿರುತ್ತಾರೆ. ಕೆಲವರು ಪರ್ವತ ಕಣಿವೆಗಳಲ್ಲಿ ತಿರುಗಾಡಲು ಇಷ್ಟಪಡುತ್ತಾರೆ. ಇನ್ನು ಕೆಲವರಿಗೆ ಸಮುದ್ರದ ದಂಡೆ ಮೇಲಿನ ಸುತ್ತಾಟ ಬಹಳ ಪ್ರಿಯವೆನಿಸುತ್ತದೆ. ಸಂಗಾತಿಗಳಲ್ಲಿ ಈ ರೀತಿಯ ವಿಭಿನ್ನ ಅಭಿರುಚಿಗಳಿದ್ದರೆ ಇಬ್ಬರ ಇಷ್ಟಗಳೂ ಹೊಂದಿಕೆಯಾಗುವಂತಹ ಸ್ಥಳವನ್ನೇ ಆಯ್ಕೆ ಮಾಡಿಕೊಳ್ಳಬೇಕು.

ಅನಗತ್ಯವಾಗಿ ಪ್ರಭಾವ ಬೀರಲು ಪ್ರಯತ್ನ – ಪ್ರವಾಸದ ಸಮಯದಲ್ಲಿ ಚೆನ್ನಾಗಿ ಕಾಣಬೇಕು ಮತ್ತು ಉತ್ತಮವಾಗಿ ವರ್ತಿಸಬೇಕೆಂದು ಎಲ್ಲರೂ ಬಯಸುತ್ತಾರೆ.ಸಂಗಾತಿಗೆ ವಿಶೇಷ ಭಾವನೆ ಮೂಡಿಸಲು ಪ್ರಯತ್ನಿಸುತ್ತಾರೆ. ಆದರೆ ಈ ಪ್ರಯತ್ನ ನಿಮ್ಮ ಸಂಗಾತಿಗೆ ನಕಲಿಯಾಗಿ ಕಾಣಿಸಬಹುದು. ಹಾಗಾಗಿ ಸಹಜವಾಗಿರಿ. ಅತಿಯಾದ ವರ್ತನೆ ಬೇಡ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚು ಫೋಟೋ ಕ್ಲಿಕ್ಕಿಸುವುದು – ದಂಪತಿಗಳು ಮೊದಲ ಬಾರಿಗೆ ಒಟ್ಟಿಗೆ ಪ್ರಯಾಣಿಸುವಾಗ ಈ ನೆನಪುಗಳನ್ನು ಶಾಶ್ವತವಾಗಿಡಲು ಬಯಸುತ್ತಾರೆ. ಆದ್ದರಿಂದ ಅವರು ಸಾಧ್ಯವಾದಷ್ಟು ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ. ಕೇವಲ ಫೋಟೋ ಬಗ್ಗೆ ಮಾತ್ರ ಗಮನಹರಿಸದೇ ಆ ಕ್ಷಣವನ್ನು ಆನಂದಿಸಿ.

ಹೋಟೆಲ್‌ನಲ್ಲಿ ಸುಮ್ಮನೆ ಸಮಯ ಕಳೆಯಬೇಡಿ – ಅನೇಕ ಬಾರಿ ದಂಪತಿಗಳು ಐಷಾರಾಮಿ ಹೋಟೆಲ್‌ಗಳಲ್ಲಿ ತಂಗಿರುತ್ತಾರೆ. ಅಲ್ಲಿ ಐಷಾರಾಮಿ ಕೊಠಡಿಗಳು, ಈಜುಕೊಳ, ಸ್ಪಾ, ಜಿಮ್‌ನಂತಹ ಹಲವಾರು ಸೌಲಭ್ಯಗಳಿರುತ್ತವೆ. ಇದರಿಂದಾಗಿ ಅವರು ಕೊಠಡಿ ಮತ್ತು ಹೋಟೆಲ್‌ನಿಂದ ಹೊರಬರಲು ಬಯಸುವುದಿಲ್ಲ. ಈ ರೀತಿ ಮಾಡದೇ ಹೊರಜಗತ್ತನ್ನೂ ನೋಡಿ ಸಂತೋಷದಿಂದ ಕಾಲ ಕಳೆಯಬೇಕು.

 

For Latest News Updates, Join Our Whatsapp Community🚩
RELATED ARTICLES

Most Popular