HomeKarnatakaBengaluru : ಇಂದಿನಿಂದ ಲಾಲ್ ಬಾಗ್ ನಲ್ಲಿ 'ಫ್ಲವರ್ ಶೋ' ಆರಂಭ, ಟಿಕೆಟ್ ದರ ಎಷ್ಟು...

Bengaluru : ಇಂದಿನಿಂದ ಲಾಲ್ ಬಾಗ್ ನಲ್ಲಿ ‘ಫ್ಲವರ್ ಶೋ’ ಆರಂಭ, ಟಿಕೆಟ್ ದರ ಎಷ್ಟು ತಿಳಿಯಿರಿ..!

ಬೆಂಗಳೂರು : ಇಂದಿನಿಂದ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ಆರಂಭವಾಗಲಿದ್ದು, ‘ಹೂ’ ಪ್ರಿಯರು ವಿವಿಧ ರೀತಿಯ ಹೂವುಗಳ ಸೊಬಗನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಜನವರಿ 18 ರ ಇಂದಿನಿಂದ 28 ರವರೆಗೆ ಲಾಲ್ ಬಾಗ್ ನಲ್ಲಿ 215ನೇ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 18ರಿಂದ 28ರ ವರೆಗೆ ಬೆಂಗಳೂರಿನ ಲಾಲ್ಬಾಗ್ನಲ್ಲಿ 215ನೇ ಫಲಪುಷ್ಪ ಪ್ರದರ್ಶನದಲ್ಲಿ 12ನೇ ಶತಮಾನದ ಬಸವಣ್ಣ ಮತ್ತು ವಚನ ಸಾಹಿತ್ಯದ ಥೀಮ್ ನಲ್ಲಿ ಹೂಗಳು ಅರಳಲಿದೆ. ಬೆಳಗ್ಗೆ 6ರಿಂದ ಸಂಜೆ 6.30ರ ವರೆಗೆ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಬಹುದಾಗಿದೆ.

ಟಿಕೆಟ್ ದರ ಎಷ್ಟು..?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಯಸ್ಕರಿಗೆ 80 ರೂ.
ಮಕ್ಕಳಿಗೆ (12 ವರ್ಷದೊಳಗೆ) 30 ರೂ.
ರಜಾ ದಿನಗಳಲ್ಲಿ 100 ರೂ.

ಜನವರಿ 18ರಂದು ಇಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 2024ನೇ ಸಾಲಿನ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಫಲಪುಷ್ಪ ಪ್ರದರ್ಶನಕ್ಕೆ ಸಮವಸ್ತ್ರ ಧರಿಸಿ ಬರುವ 10ನೇ ತರಗತಿವರೆಗಿನ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರುತ್ತದೆ. ತೋಟಗಾರಿಕೆ ಇಲಾಖೆಯ ವೆಬ್ಸೈಟ್ ಮೂಲಕ ಆನ್ಲೈನ್ ಮೂಲಕ ಸಹ ಟಿಕೆಟ್ ಪಡೆಯಲು ಅವಕಾಶವಿದೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular