![](https://kannadadunia.com/wp-content/uploads/2024/01/mangaluru-blast-.jpg)
ಮಂಗಳೂರು: ಮಂಗಳೂರಿನ ನಾಗುರಿ ಬಳಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಸಂತ್ರಸ್ತನಿಗೆ ರಾಜ್ಯ ಸರ್ಕಾರದಿಂದ ಪರಿಹಾರ ಧನ ವಿತರಿಸಲಾಗಿದೆ.
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಂತ್ರಸ್ತರಾಗಿದ್ದ ಆಟೋ ಚಾಲಕ ಪುರುಷೋತ್ತಮ ಪೂಜಾರಿಗೆ 2 ಲಕ್ಷ ರೂಪಾಯಿ ಪರಿಹಾರ ಹಣ ವಿತರಿಸಲಾಯಿತು.
ಸಂತ್ರಸ್ತನಿಗೆ ಪರಿಹಾರ ನೀಡುವಂತೆ ಮಾಜಿ ಎಂಎಲ್ ಸಿ ಐವಾನ್ ಡಿಸೋಜಾ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರದ ಚೆಕ್ ನ್ನು ದಕ್ಷಿಣ ಕನ್ನಡ ಡಿಸಿ ಕಚೇರಿಯಲ್ಲಿ ಪುರುಷೋತ್ತಮ್ ಅವರಿಗೆ ವಿತರಿಸಲಾಯಿತು.