ಹುಡುಗಿಯರನ್ನು ಆಕರ್ಷಿಸಲು ಹುಡುಗರು ಏನೆಲ್ಲ ಕಸರತ್ತು ಮಾಡ್ತಾರೆ. ಇನ್ಮುಂದೆ ಇದಕ್ಕಾಗಿ ಕಷ್ಟಪಡಬೇಕಾಗಿಲ್ಲ. ಈಗಿನಿಂದಲೇ ಬೆಳ್ಳುಳ್ಳಿ ತಿನ್ನಲು ಶುರು ಮಾಡಿ. ಹೌದು. ಬೆಳ್ಳುಳ್ಳಿ ತಿನ್ನುವ ಹುಡುಗರು ಹುಡುಗಿಯರಿಗೆ ಇಷ್ಟವಾಗ್ತಾರಂತೆ. ಹೀಗಂತ ಸಂಶೋಧನೆಯೊಂದು ಹೇಳಿದೆ.
ಸಂಶೋಧನೆ ಪ್ರಕಾರ ಯಾವ ಪುರುಷ ಆಹಾರದ ಜೊತೆ ಬೆಳ್ಳುಳ್ಳಿ ಸೇವನೆ ಮಾಡ್ತಾನೋ ಆ ಪುರುಷನ ಕಡೆ ಹುಡುಗಿಯರು ಹೆಚ್ಚು ಆಕರ್ಷಿತರಾಗ್ತಾರಂತೆ.
ಬೆಳ್ಳುಳ್ಳಿಯಲ್ಲಿ ಆಂಟಿಬಯೋಟಿಕ್, ಆಂಟಿ ವೈರಲ್ ಹಾಗೂ ಆಂಟಿ ಫಂಗಲ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದ್ರಿಂದಾಗಿ ಪುರುಷರ ಬೆವರಿನ ವಾಸನೆ ಬದಲಾಗುತ್ತದೆ. ಪುರುಷರ ಆ ವಾಸನೆ ಮಹಿಳೆಯರನ್ನು ಆಕರ್ಷಿಸುತ್ತದೆ. ಇದು ಆರೋಗ್ಯವಂತ ವ್ಯಕ್ತಿಯ ಗುರುತು ಕೂಡ ಹೌದು ಎಂದು ಸಂಶೋಧಕರು ಹೇಳಿದ್ದಾರೆ.
ಬೆಳ್ಳುಳ್ಳಿ ಸೇವನೆಯಿಂದ ಲೈಂಗಿಕ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಬೆಳ್ಳುಳ್ಳಿ ಸೇವನೆ ಮಾಡುವ ಪುರುಷ ಸದಾ ರೋಮ್ಯಾಂಟಿಕ್ ಜೀವನ ಬಯಸ್ತಾನೆಂಬುದನ್ನು ಸಂಶೋಧನೆಯಲ್ಲಿ ಹೇಳಲಾಗಿದೆ. ಸಂಶೋಧಕರು ಬೆಳ್ಳುಳ್ಳಿಯನ್ನು ಹೇಗೆ ಸೇವನೆ ಮಾಡಬೇಕೆನ್ನುವ ಬಗ್ಗೆಯೂ ವಿವರ ನೀಡಿದ್ದಾರೆ.
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ 7-8 ಬೆಳ್ಳುಳ್ಳಿ ಮೊಗ್ಗನ್ನು ಸೇವನೆ ಮಾಡಬೇಕು. ಇದು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.