HomeKarnatakaBIG NEWS: ಮಗನ ಸಾವಿನಿಂದ ನೊಂದ ತಂದೆ ಆತ್ಮಹತ್ಯೆಗೆ ಶರಣು

BIG NEWS: ಮಗನ ಸಾವಿನಿಂದ ನೊಂದ ತಂದೆ ಆತ್ಮಹತ್ಯೆಗೆ ಶರಣು

ಮಂಗಳೂರು: ಮಗನ ಸಾವಿನಿಂದ ಮನನೊಂದಿದ್ದ ತಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ.

14 ವರ್ಷದ ಮಗ ಯಕ್ಷಿತ್ ಕೆಲ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದ. ಮಗನ ಸಾವಿನಿಂದ ಕಂಗೆಟ್ಟಿದ್ದ ತಂದೆ ಯೋಗೀಶ್ ಪೂಜಾರಿ (41) ಕುಗ್ಗಿಹೋಗಿದ್ದರು. ಮಗನ 14ನೇ ದಿನದ ಉತ್ತರ ಕ್ರಿಯೆಯನ್ನು ನೆರವೇಸಿದ್ದ ತಂದೆ ಯೋಗೀಶ್ ಪೂಜಾರಿ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾರೆ.

8ನೇ ತರಗತಿ ಓದುತ್ತಿದ್ದ ಯಕ್ಷಿತ್ ಜನವರಿ 4ರಂದು ತಮ್ಮನ ಜೊತೆ ಆಟವಾಡುವಾಗ ಜಗಳ ಮಾಡಿಕೊಂಡಿದ್ದ. ತಂದೆ-ತಾಯಿ ಕೆಲಸಕ್ಕೆ ಹೋಗಿದ್ದ ವೇಳೆ ಮಕ್ಕಳಿಬ್ಬರೂ ಆಟವಾಡುತ್ತಿದ್ದಾಗ ಇಬ್ಬರ ನಡುವೆ ಜಗಳ ಶುರುವಾಗಿದೆ. ಕೋಪದ ಬರದಲ್ಲಿ ತಮ್ಮ ಯಕ್ಷಿತ್ ಹೊಟ್ಟೆಗೆ ಕಚ್ಚಿ ಗಾಯಗೊಳಿಸಿದ್ದ. ಇದರಿಂದ ನೊಂದ ಅಣ್ಣ ಯಕ್ಷಿತ್ ತಮ್ಮನ ಎದುರಲ್ಲೇ ತಾಯಿಯ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗ ಮಗನ ಸಾವಿನಿಂದ ಮನನೊಂದ ತಂದೆ ಕೂಡ ನೇಣಿಗೆ ಕೊರಳೊಡ್ಡಿದ್ದಾರೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular