HomeKarnatakaBREAKING : 'ಘಾಟಿ ಸುಬ್ರಹ್ಮಣ್ಯ' ರಥೋತ್ಸವದಲ್ಲಿ ರಥದ ಚಕ್ರಕ್ಕೆ ಸಿಲುಕಿದ ಮಹಿಳೆ, ತಪ್ಪಿದ ಅನಾಹುತ

BREAKING : ‘ಘಾಟಿ ಸುಬ್ರಹ್ಮಣ್ಯ’ ರಥೋತ್ಸವದಲ್ಲಿ ರಥದ ಚಕ್ರಕ್ಕೆ ಸಿಲುಕಿದ ಮಹಿಳೆ, ತಪ್ಪಿದ ಅನಾಹುತ

ಬೆಂಗಳೂರು : ಘಾಟಿ ಸುಬ್ರಹ್ಮಣ್ಯದಲ್ಲಿ ರಥದ ಚಕ್ರಕ್ಕೆ ಮಹಿಳೆಯೊಬ್ಬರು ಸಿಲುಕಿದ್ದು, ಅದೃಷ್ಟವಶಾತ್ ಅನಾಹುತ ತಪ್ಪಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ  ದೊಡ್ಡಬಳ್ಳಾಪುರದಲ್ಲಿ   ಘಾಟಿ ಸುಬ್ರಹ್ಮಣ್ಯದಲ್ಲಿ ಬ್ರಹ್ಮರಥೋತ್ಸವದ ವೇಳೆ ಈ ಘಟನೆ ನಡೆದಿದೆ. ಸುಬ್ರಹ್ಮಣ್ಯ ರಥೋತ್ಸವದ ವೇಳೆ ರಥ ಎಳೆಯುವಾಗ ಚಕ್ರದ ಅಡಿಯಲ್ಲಿ ಮಹಿಳೆಯೊಬ್ಬಳು ಸಿಲುಕಿದ್ದಾರೆ. ತಕ್ಷಣ ಪೊಲೀಸರು ಹಾಗೂ ಸಿಬ್ಬಂದಿಗಳು ಮಹಿಳೆಯನ್ನು ಚಕ್ರದಿಂದ ಎಳೆದು ಪಾರು ಮಾಡಿದ್ದಾರೆ . ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ.

ದಕ್ಷಿಣ ಭಾರತದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಾಲೂಕಿನ ಶ್ರೀ ಘಾಟಿ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಕಾರ್ಯಕ್ರಮವು ಜನವರಿ16 ರ ಮಂಗಳವಾರ ಮಧ್ಯಾಹ್ನ 12-15ರಿಂದ 12-30 ಗಂಟೆಗೆ ಸಲ್ಲುವ ಶುಭ ಮೇಷ ಲಗ್ನದ ಮುಹೂರ್ತದಲ್ಲಿ ನಡೆದಿದೆ. ಸಾವಿರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ರಥೋತ್ಸವ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular