HomeKarnatakaಕ್ರಿಮಿನಲ್ ಕೇಸ್ ದಾಖಲಾದ ಮಾತ್ರಕ್ಕೆ ವಿಚಾರಣೆ ನಡೆಸದೆ ನೌಕರನ ವಜಾ ಮಾಡುವಂತಿಲ್ಲ: ಹೈಕೋರ್ಟ್ ಆದೇಶ

ಕ್ರಿಮಿನಲ್ ಕೇಸ್ ದಾಖಲಾದ ಮಾತ್ರಕ್ಕೆ ವಿಚಾರಣೆ ನಡೆಸದೆ ನೌಕರನ ವಜಾ ಮಾಡುವಂತಿಲ್ಲ: ಹೈಕೋರ್ಟ್ ಆದೇಶ

ಬೆಂಗಳೂರು: ಕ್ರಿಮಿನಲ್ ಮೊಕದ್ದಮೆ ದಾಖಲಾದ ಮಾತ್ರಕ್ಕೆ ವಿಚಾರಣೆ ನಡೆಸದೆ ಗ್ರಾಮ ಪಂಚಾಯಿತಿ ನೌಕರನ ವಜಾಗೊಳಿಸುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಗ್ರಾಮ ಪಂಚಾಯಿತಿ ನೌಕರ ಗಣೇಶ್ ಎಂಬವರ ಮರುನೇಮಕಕ್ಕೆ ಸೂಚಿಸಿದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆ ಅತ್ತಿಕರಿಬೆಟ್ಟು ಗ್ರಾಮ ಪಂಚಾಯಿತಿ ಸಲ್ಲಿಸಿದ್ದ ಮೇಲ್ಮನವಿ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ.

ಉದ್ಯೋಗ ಜೀವನೋಪಾಯದ ಪ್ರಮುಖ ಮೂಲವಾಗಿದೆ. ಒಬ್ಬರ ಕೆಲಸ ಕಸಿದುಕೊಳ್ಳುವುದು ಸೂಕ್ತವಲ್ಲ. ಪ್ರಕರಣದಲ್ಲಿ ಮನಬಂದಂತೆ ಕೆಲಸದಿಂದ ವಜಾ ಮಾಡಲಾಗಿದೆ. ಇದು ಅನುಚ್ಛೇದ 21ರ ಅಡಿ ಖಾತರಿಪಡಿಸಲಾದ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕಿನ ವಿರುದ್ಧವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅನುಚ್ಛೇದ 14ರ ಅಡಿ ವಿಚಾರಣೆಗೆ ಅವಕಾಶ ನೀಡದೆ ಸೇವೆಯಿಂದ ವಜಾಗೊಳಿಸುವ ಮೂಲಕ ಯಾವುದೇ ನೌಕರರ ಶಿಕ್ಷಿಸಲಾಗುವುದಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ನಮ್ಮದು ಕಲ್ಯಾಣ ರಾಜ್ಯವಾಗಿದೆ. ಅನುಚ್ಛೇದ 12ರ ಅಡಿ ಮಾನವೀಯ ಮೌಲ್ಯಗಳೊಂದಿಗೆ ನೌಕರರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳಬೇಕು. ವಿಚಾರಣೆಯ ನಂತರ ಅಪರಾಧ ಎಸಗಿರುವುದು ಸಾಬೀತಾದಲ್ಲಿ ಕೆಲಸದಿಂದ ವಜಾ ಮಾಡಬಹುದು ಎಂದು ಹೇಳಿ ಮೇಲ್ಮನವಿ ವಜಾಗೊಳಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular