HomeKarnatakaBIG NEWS: ಮಾನಸಿಕ ಸ್ಥಿರತೆ ಇರುವವರ್ಯಾರೂ ಈ ರೀತಿ ಮಾತನಾಡಲ್ಲ; ಸಂಸದ ಅನಂತ ಕುಮಾರ್ ಹೆಗಡೆ...

BIG NEWS: ಮಾನಸಿಕ ಸ್ಥಿರತೆ ಇರುವವರ್ಯಾರೂ ಈ ರೀತಿ ಮಾತನಾಡಲ್ಲ; ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆಗೆ ಡಿಸಿಎಂ ಕಿಡಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ. ಅನಂತ ಕುಮಾರ್ ಹೆಗಡೆ ಅವರ ಮಾನಸಿಕ ಸ್ಥಿತಿ ಸರಿಯಿದ್ದಂತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮಾನಸಿಕ ಸ್ಥಿರತೆ ಇರುವವರ್ಯಾರೂ ಈ ರೀತಿ ಮಾತನಾಡಲ್ಲ. ಹಾಗಾಗಿ ಹೆಗಡೆ ಅವರ ಆರೋಗ್ಯದ ಬಗ್ಗೆ ಅವರ ಪಕ್ಷದ ಮುಖಂಡರೇ ಕಾಳಜಿ ವಹಿಸಬೇಕು ಎಂದಿದ್ದಾರೆ.

ಬಿಜೆಪಿ ನಾಯಕರಿಗೆ ಅನಂತ ಕುಮಾರ್ ಹೆಗಡೆ ಮಾತನಾಡಿರುವುದು ತಪ್ಪು ಎಂದು ಗೊತ್ತಾಗಿದೆ. ಅವರೇ ಅವರ ಬಗ್ಗೆ ಗಮನಕೊಡಲಿ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಲೋಕಸಭಾ ಚುನಾವಣೆ ಸಂಬಂಧ ಜನವರಿ 19ರಂದು ಸಂಜೆ 4 ಗಂಟೆಗೆ ಸಭೆ ಕರೆಯಲಾಗಿದೆ. ಅಂದು ಚುನಾವಣಾ ಸಮಿತಿ ಸಭೆ ನಡೆಯಲಿದೆ ಎಂದು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular