HomeKarnatakaಪ್ರವಾಸಕ್ಕೆಂದು ಬಂದು ಬಾವಿಗೆ ಬಿದ್ದ ಯುವಕ; ಉಡುಪಿ ಶ್ರೀಕೃಷ್ಣ ಮಠದ ಬಳಿ ಘಟನೆ

ಪ್ರವಾಸಕ್ಕೆಂದು ಬಂದು ಬಾವಿಗೆ ಬಿದ್ದ ಯುವಕ; ಉಡುಪಿ ಶ್ರೀಕೃಷ್ಣ ಮಠದ ಬಳಿ ಘಟನೆ

ಉಡುಪಿ: ಪ್ರವಾಸಕ್ಕೆಂದು ಬಂದಿದ್ದ ಯುವಕ ಆಯತಪ್ಪಿ ಬಾವಿಗೆ ಬಿದ್ದ ಘಟನೆ ಉಡುಪಿ ಶ್ರೀಕೃಷ್ಣ ಮಠದ ಬಳಿ ನಡೆದಿದೆ.

ಬಾಗಲಕೋಟೆ ಮೂಲದ ಸಂತೋಷ್ ಎಂಬಾತ ಪ್ರವಾಕ್ಕೆಂದು ಉಡುಪಿಗೆ ಬಂದಿದ್ದಾನೆ. ಈ ವೇಳೆ ಶ್ರೀಕೃಷ್ಣ ಮಠದ ಬಳಿ ಸುತ್ತಾಡುತ್ತಾ ಬಾವಿಯ ಕಟ್ಟೆಯ ಮೇಲೆ ಕುಳಿತಿದ್ದ. ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿದ ಸಂತೋಷ್ ಬಾವಿಯೊಳಗೆ ಬಿದ್ದಿದ್ದಾನೆ.

ಸ್ಥಳೀಯರು ಬಾವಿಯೊಳಗೆ ಹಗ್ಗ ಬಿಟ್ಟು ಪ್ರವಾಸಿಗನನ್ನು ಮೇಲಕೆತ್ತಿದ್ದಾರೆ. ಬಾವಿಯಲ್ಲಿ ನೀರು ಕಡಿಮೆ ಇದ್ದುದರಿಂದ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ಪ್ರವಾಸಿಗ ಸುರಕ್ಷಿತವಾಗಿದ್ದಾನೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular