ನಿಮ್ಮ ‘ಮೊಬೈಲ್’ ಬ್ಯಾಟರಿ ಹೆಚ್ಚು ಸಮಯ ಬಾಳಿಕೆ ಬರಬೇಕೆ..? ಹಾಗಾದರೆ ಈ ಸಿಂಪಲ್ ಟಿಪ್ಸ್ ಬಳಸುವ ಮೂಲಕ ನಿಮ್ಮ ಮೊಬೈಲ್ ಬ್ಯಾಟರಿಯನ್ನು ಉಳಿಸಿಕೊಳ್ಳಿ.
1) ನಿಮ್ಮ ಒರಿಜಿನಲ್ ಚಾರ್ಜರ್ ಕಳೆದುಹೋಯಿತು ಎಂದು ಅಂಗಡಿಯಲ್ಲಿ ಕಡಿಮೆ ದರದಲ್ಲಿ ಯಾವುದು ಸಿಗುತ್ತದೆ ಎಂದು ಕಡಿಮೆ ಬೆಲೆಯ ಚಾರ್ಜರ್ ತಂದು ಚಾರ್ಜಿಂಗ್ ಹಾಕಬೇಡಿ.
2) ಹಲವರು ದಿನವಿಡೀ ಫೋನ್ ಬಳಸಿ. ರಾತ್ರಿ ಮಲಗುವ ವೇಳೆ ಅದನ್ನು ಚಾರ್ಜ್ಗೆ ಹಾಕಿ ಮಲಗುತ್ತಾರೆ. ಎಂದಿಗೂ ಈ ತಪ್ಪು ಮಾಡಬೇಡಿ.
3) ನಿಮ್ಮ ಮೊಬೈಲ್ ಕಡಿಮೆ ಚಾರ್ಜ್ ಇದ್ದಾಗ ಅಥವಾ ಸ್ವಿಚ್ ಆಫ್ ಆದಾಗ ಮೊಬೈಲ್ ಚಾರ್ಜ್ ಹಾಕುತ್ತೀರಿ, ನಂತರ ಬೇಗ ತೆಗೆಯುತ್ತೀರಿ. ಹೀಗೆ ಮಾಡಬೇಡಿ. ಇದಾದ ನಂತರ ನಿಮ್ಮ ಫೋನ್ ಕೊನೆ ಪಕ್ಷ 80% ಆದರೂ ಚಾರ್ಜ್ ಆಗಲು ಬಿಡಿ.
4) ಪದೇ ಪದೇ ಮೊಬೈಲ್ ಚಾರ್ಜ್ ಮಾಡಬೇಡಿ.
5) ಮಾರುಕಟ್ಟೆಯಲ್ಲಿ ಸಿಗುವ ಕಡಿಮೆ ಬೆಲೆಯ ಪವರ್ ಬ್ಯಾಂಕ್ ತೆಗೆದುಕೊಂಡು ಬಳಸಲು ಹೋಗಬೇಡಿ. ಇದರಿಂದಾಗಿ ನಿಮ್ಮ ಫೋನಿನ ಬ್ಯಾಟರಿಯ ಆಯಸ್ಸು ಬೇಗ ಕಡಿಮೆಯಾಗುತ್ತದೆ.
6) ನಿಮ್ಮ ಮೊಬೈಲ್ನೊಂದಿಗೆ ನೀಡಿರುವ ಚಾರ್ಜರ್ ನಿಂದಲೇ ಫೋನ್ ಚಾರ್ಜ್ ಮಾಡಿ. ಕಂಪ್ಯೂಟರ್ಗೆ ಹಾಕಿ ಇಲ್ಲವೇ ಬೇರೆ ಕಂಪನಿಗಳ ಚಾರ್ಜರ್ ಬಳಸಿ ಚಾರ್ಜ್ ಮಾಡಿದರೆ ಸಮಸ್ಯೆ ಎದುರಾಗುತ್ತದೆ.
7) ಮೊಬೈಲ್ ಓವರ್ಹೀಟ್ ಮಾಡುವುದು ಕೂಡ ಬ್ಯಾಟರಿಯ ಮೇಲೆ ಪರಿಣಾಮ ಬೀರುತ್ತದೆ, ಚಾರ್ಜ್ ಆದ ಕೂಡಲೇ ಬೇಗ ತೆಗೆದುಬಿಡಿ.