ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಗಂಗಾಸಾಗರ ಮೇಳಕ್ಕೆ ತೆರಳುತ್ತಿದ್ದ ಮೂವರು ಸಾಧುಗಳ ಮೇಲೆ ಗುಂಪೊಂದು ಮನಬಂದಂತೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಉತ್ತರ ಪ್ರದೇಶ ಮೂಲದ ಮೂವರು ಸಾಧುಗಳು ಗಂಗಾಸಾಗರ ಮೇಲಕ್ಕೆ ತೆರಳು ವಾನವೊಂದು ಬುಕ್ ಮಾಡಿ ಹೊರಟಿದ್ದರು. ಅವರಿಗೆ ದಾರಿ ತಪ್ಪಿದ್ದರಿಂದ ವಾಹನ ನಿಲ್ಲಿಸಿ ರಸ್ತೆ ಬಗ್ಗೆ ವಿಚಾರಿಸಿದಾಗ ಕೆಲ ಸ್ಥಳೀಯರು ಅನುಮಾನಗೊಂಡು ಅವರು ಅಪಹರಣಕಾರರಿರಬಹುದು ಎಂದು ತಪ್ಪಾಗಿ ಭಾವಿಸಿ ಸಾಧುಗಳ ಮೇಲೆ ಹಲ್ಲೆ ನಡೆಸಿದ್ದಾರೆ.
ಸಾಧುಗಳು ರಸ್ತೆ ಬದಿ ಇದ್ದ ಮೂವರು ಹೆಣ್ಣುಮಕ್ಕಳ ಬಳಿ ಮಾರ್ಗವನ್ನು ವಿಚಾರಿಸಿದ್ದಾರೆ. ಈ ವೇಳೆ ಹೆಣ್ಣುಮಕ್ಕಳು ಹೆದರಿ ಕಿರುಚುತ್ತಾ ಓಡಿ ಹೋಗಿದ್ದಾರೆ. ಇದನ್ನು ಕಂಡ ಸ್ಥಳೀಯರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಾಧುಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಸಾಧುಗಳು ಕೈಮುಗಿದು ಕೇಳಿಕೊಂಡರೂ ಬಿಟ್ಟಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಸಾಧುಗಳನ್ನು ರಕ್ಷಿಸಿ ಕಾಸಿಪುರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ವಿಚಾರಣೆ ಬಳಿಕ ಸಾಧುಗಳನ್ನು ಗಂಗಾಸಾಗರಕ್ಕೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಿ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ.