ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಖ್ಯಾತಿ ಇಡೀ ಜಗತ್ತಿಗೆ ತಿಳಿದಿದೆ. ಹಲವು ಸಂಶೋಧನೆ ನಡೆಸುವ ಮೂಲಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಸ್ಪರ್ಧಿಸಲು ಇಸ್ರೋ ಬಾಹ್ಯಾಕಾಶ ವಿಜ್ಞಾನದಲ್ಲಿ ದಾಪುಗಾಲು ಇಡುತ್ತಿದೆ.
ನಿಮಗೂ ಇಸ್ರೋದಲ್ಲಿ ಕೆಲಸ ಮಾಡುವ ಕನಸು ಇದೆಯಾ..ಆ ಆರ್ಹತೆಯಿದ್ದರೆ ನೀವು ಅರ್ಜಿ ಸಲ್ಲಿಸಬಹುದು. ಇಸ್ರೋದಲ್ಲಿ ಪ್ರತಿಷ್ಠಿತ ಉದ್ಯೋಗಗಳಿಗೆ ಇತ್ತೀಚಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಇಸ್ರೋದ ಸ್ಪೇಸ್ ಅಪ್ಲಿಕೇಷನ್ ಸೆಂಟರ್ (ಎಸ್ಎಸಿ) ವಿವಿಧ ವಿಭಾಗಗಳಲ್ಲಿ ವಿಜ್ಞಾನಿ / ಎಂಜಿನಿಯರ್ ‘ಎಸ್ಸಿ’ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಸೈಂಟಿಸ್ಟ್ ಇಂಜಿನಿಯರ್-ಅಗ್ರಿಕಲ್ಚರ್, ಸೈಂಟಿಸ್ಟ್ ಇಂಜಿನಿಯರ್-ಅಟ್ಮಾಸ್ಫಿಯರ್ ಸೈನ್ಸಸ್ ಅಂಡ್ ಓಷಿಯನೋಗ್ರಫಿ, ಸೈಂಟಿಸ್ಟ್ ಇಂಜಿನಿಯರ್-ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಹುದ್ದೆಗಳಿಗೆ ಎಸ್ಎಸಿ ನೇಮಕಾತಿ ನಡೆಸುತ್ತಿದೆ.
* ಅರ್ಹತೆ ಏನು?
ಇಸ್ರೋ ಸೈಂಟಿಸ್ಟ್ ಎಂಜಿನಿಯರ್ – ಅಗ್ರಿಕಲ್ಚರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಎಸ್ಸಿ ಅಗ್ರಿಕಲ್ಚರಲ್ ಫಿಸಿಕ್ಸ್/ ಅಗ್ರಿಕಲ್ಚರಲ್ ಮೆಟರಾಲಜಿ/ ಅಗ್ರೋನಾಮಿಯಲ್ಲಿ ತತ್ಸಮಾನ ಕೋರ್ಸ್ ಪೂರ್ಣಗೊಳಿಸಿರಬೇಕು. ಕನಿಷ್ಠ 65% ಅಂಕಗಳೊಂದಿಗೆ M.Sc ವಿದ್ಯಾರ್ಹತೆ ಅಥವಾ 6.84 ಸಿಜಿಪಿಎ ಗ್ರೇಡಿಂಗ್ ಹೊಂದಿರಬೇಕು (ಎಲ್ಲಾ ವರ್ಷಗಳು / ಸೆಮಿಸ್ಟರ್ಗಳ ಸರಾಸರಿ).
ಸೈಂಟಿಸ್ಟ್ ಎಂಜಿನಿಯರ್ – ಅಟ್ಮಾಸ್ಫಿಯರ್ ಸೈನ್ಸಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಎಸ್ಸಿ ಭೌತಶಾಸ್ತ್ರ / ವಾತಾವರಣ ವಿಜ್ಞಾನ / ಪವನಶಾಸ್ತ್ರ / ಸಾಗರ ವಿಜ್ಞಾನವನ್ನು ಅಧ್ಯಯನ ಮಾಡಿರಬೇಕು. ಕನಿಷ್ಠ 65% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು (ಎಲ್ಲಾ ವರ್ಷಗಳು / ಸೆಮಿಸ್ಟರ್ ಗಳ ಸರಾಸರಿ) ಅಥವಾ ಸಿಜಿಪಿಎ ಗ್ರೇಡಿಂಗ್ 6.84 ಆಗಿರಬೇಕು. ಈ ಎರಡು ಹುದ್ದೆಗಳಿಗೆ 18 ರಿಂದ 28 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
ಸೈಂಟಿಸ್ಟ್ ಎಂಜಿನಿಯರ್-ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಇ / ಎಂಟೆಕ್ನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ನಲ್ಲಿ ಇಮೇಜ್ ಪ್ರೊಸೆಸಿಂಗ್ / ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ / ಕಂಪ್ಯೂಟರ್ ವಿಷನ್ನಲ್ಲಿ ಸ್ಪೆಷಲೈಸೇಶನ್ ಹೊಂದಿರಬೇಕು. ಕನಿಷ್ಠ 60% ಸ್ಕೋರ್ (ಸರಾಸರಿ ಎಲ್ಲಾ ವರ್ಷಗಳು / ಸೆಮಿಸ್ಟರ್ಗಳು) ಅಥವಾ 6.5 ಸಿಜಿಪಿಎ / ಸಿಪಿಐ ಗ್ರೇಡಿಂಗ್ ಅಗತ್ಯವಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 30 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
* ನಿಮ್ಮನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?
ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಅಭ್ಯರ್ಥಿಯ ಕಾರ್ಯಕ್ಷಮತೆಯ ಆಧಾರದ ಮೇಲೆ ಉದ್ಯೋಗಗಳಿಗೆ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳನ್ನು 1:5 ರ ಅನುಪಾತದಲ್ಲಿ ಸಂದರ್ಶನಕ್ಕೆ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ಅರ್ಹ ಮತ್ತು ಆಸಕ್ತರು ಇಸ್ರೋದ ಅಧಿಕೃತ ವೆಬ್ಸೈಟ್ನಲ್ಲಿ ಆನ್ಲೈನ್ ಅರ್ಜಿಗಳನ್ನು ಸಲ್ಲಿಸಬಹುದು.
ಉತ್ತಮ ಸಂಬಳ
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 56,100 ರೂ.ಗಳಿಂದ 1,77,500 ರೂ.ಗಳವರೆಗೆ ಸಂಬಳ ನೀಡಲಾಗುತ್ತದೆ. ಈ ನೇಮಕಾತಿಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ನೀವು ಇಸ್ರೋದ ಅಧಿಕೃತ ವೆಬ್ಸೈಟ್ ಅನ್ನು ಪರಿಶೀಲಿಸಬಹುದು.