HomeKarnataka3064 ಪೊಲೀಸ್ ಕಾನ್ ಸ್ಟೆಬಲ್ ನೇಮಕಾತಿಗೆ ಜ. 28ರಂದು ಲಿಖಿತ ಪರೀಕ್ಷೆ

3064 ಪೊಲೀಸ್ ಕಾನ್ ಸ್ಟೆಬಲ್ ನೇಮಕಾತಿಗೆ ಜ. 28ರಂದು ಲಿಖಿತ ಪರೀಕ್ಷೆ

ಬೆಂಗಳೂರು: ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಕಾನ್ ಸ್ಟೆಬಲ್ 3064 ಹುದ್ದೆಗಳ ನೇಮಕಾತಿಗೆ ಜನವರಿ 28ರಂದು ಲಿಖಿತ ಪರೀಕ್ಷೆ ನಡೆಸಲಾಗುವುದು.

ಸಿಎಆರ್, ಡಿಎಆರ್ ಸಶಸ್ತ್ರ ಪೋಲಿಸ್ ಕಾನ್ ಸ್ಟೆಬಲ್ ನೇಮಕಾತಿ ವಿಭಾಗ ಜನವರಿ 28ರಂದು ಬೆಳಗ್ಗೆ 11 ರಿಂದ 12:30 ವರೆಗೆ ರಾಜ್ಯವ್ಯಾಪಿ ಲಿಖಿತ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಿದೆ.

ಅರ್ಹ ಅಭ್ಯರ್ಥಿಗಳಿಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತಿದ್ದು, ಅಭ್ಯರ್ಥಿಗಳು ವೆಬ್ಸೈಟ್ ನಲ್ಲಿ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ನೇಮಕಾತಿ ವಿಭಾಗದ ಡಿಐಜಿಪಿ ಡಾ. ಮಾರ್ಟಿನ್ ಮಾರ್ಬನ್ ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular