HomeLive Newsಮಹಿಳಾ ಟಿ ಟ್ವೆಂಟಿ ಸರಣಿ; ಇಂದು ಭಾರತ - ಆಸ್ಟ್ರೇಲಿಯಾ ನಡುವಣ ಅಂತಿಮ ಟಿ 20...

ಮಹಿಳಾ ಟಿ ಟ್ವೆಂಟಿ ಸರಣಿ; ಇಂದು ಭಾರತ – ಆಸ್ಟ್ರೇಲಿಯಾ ನಡುವಣ ಅಂತಿಮ ಟಿ 20 ಪಂದ್ಯ

ಮಹಿಳಾ ಟಿ ಟ್ವೆಂಟಿ ಸರಣಿಯ ಅಂತಿಮ ಪಂದ್ಯ ಇಂದು ನವಿ ಮುಂಬೈನಲ್ಲಿ  ನಡೆಯಲಿದ್ದು, ಎರಡು ತಂಡಗಳು ಸರಣಿಗಾಗಿ ಹೋರಾಟ ನಡೆಸಲಿವೆ. ಈಗಾಗಲೇ ಎರಡು ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆಲ್ಲುವ ಮೂಲಕ ಸಮಬಲ ಸಾಧಿಸಿದ್ದು, ಮಹಿಳಾ ಭಾರತ ತಂಡ ಈ ಪಂದ್ಯವನ್ನು ಗೆದ್ದು ಏಕದಿನ ಸರಣಿಯ ಸೋಲಿನ ಸೇಡನ್ನು ತೀರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಭಾರತ ತಂಡದ ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಹಾಗೂ ದೀಪ್ತಿ ಶರ್ಮಾ ಅವರ ಮೇಲೆ ಇಂದು ಸಾಕಷ್ಟು ನಿರೀಕ್ಷೆ ಇದೆ. ಮಹಿಳಾ ಕ್ರಿಕೆಟ್ನಲ್ಲೂ ಬಲಿಷ್ಠವಾಗಿರುವ ಆಸ್ಟ್ರೇಲಿಯಾ ತಂಡಕ್ಕೆ ಇಂದು ಭಾರತ ಯಾವ ರೀತಿ ಉತ್ತರ ನೀಡಲಿದೆ ಕಾದು ನೋಡಬೇಕಾಗಿದೆ. ಇಂದು ಸಂಜೆ 7:00 ಗಂಟೆಗೆ ಪಂದ್ಯ ಆರಂಭವಾಗಲಿದೆ.

For Latest News Updates, Join Our Whatsapp Community🚩
RELATED ARTICLES

Most Popular