ಬೆಂಗಳೂರು : ಶಾಲಾ ಮಕ್ಕಳ ಶಾಲಾ ಬ್ಯಾಗ್ ಹೊರೆ ಇಳಿಸಲು ‘ಶಿಕ್ಷಣ ಇಲಾಖೆ’ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪಠ್ಯ ಪುಸ್ತಕವನ್ನು ಭಾಗ-1, ಭಾಗ-2 ವಿಭಾಗಗಳಾಗಿ ವಿಂಗಡಿಸಲು ಚಿಂತನೆ ನಡೆಸಿದೆ.
ಹೌದು, ಶಾಲಾ ಮಕ್ಕಳ ಮಣ ಭಾರದ ಬ್ಯಾಗ್ ಹೊರೆ ಕಡಿಮೆ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದ್ದು, ಪ್ರಸಕ್ತ ವರ್ಷದಿಂದ ಪಠ್ಯಪುಸ್ತಕಗಳು ಭಾಗ-1 ಮತ್ತು ಭಾಗ-2 ಎಂದು ಎರಡು ವಿಭಾಗಗಳಾಗಿ ವಿಂಗಡನೆ ಮಾಡಲು ಮುಂದಾಗಿದೆ. ಎಸ್ಎ-1 ಹಾಗೂ ಎಸ್ಎ-2ಗಳಾಗಿ ವಿಂಗಡಿಸಿ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಲು ಇಲಾಖೆ ತೀರ್ಮಾನ ಮಾಡಿದೆ . ಅರ್ಧವಾರ್ಷಿಕ ಪರೀಕ್ಷೆ ವರೆಗೆ ಭಾಗ-1 ಹಾಗೂ ದಸರಾ ರಜೆ ಮುಗಿದ ಬಳಿಕ ಭಾಗ-2 ಪಠ್ಯಪುಸ್ತಕಗಳನ್ನು ತಂದರೆ ಸಾಕು ಎಂಬ ಪ್ಲ್ಯಾನ್ ನ್ನು ಸರ್ಕಾರ ಮಾಡಿದೆ. ಅಲ್ಲದೇ ಹೆಚ್ಚುವರಿ ಮಕ್ಕಳ ನೋಟ್ ಪುಸ್ತಕಗಳ್ನು ಶಾಲೆಯಲ್ಲೇ ಇಡುವ ವ್ಯವಸ್ಥೆಗೆ ಕೂಡ ಇಲಾಖೆ ಚಿಂತನೆ ನಡೆಸಿದೆ.
ಶಿಕ್ಷಣ ಇಲಾಖೆ ತಿಂಗಳಿನ ಪ್ರತಿ ಮೂರನೇ ಶನಿವಾರ ಬ್ಯಾಗ್ ಲೆಸ್ ಡೇ ಗೆ ಮುಂದಾಗಿದೆ. ಆದರೆ ಇದು ಅಷ್ಟರ ಮಟ್ಟಿಗೇನು ಯಶಸ್ವಿ ಆಗ್ತೀಲ್ಲ. ಹೀಗಾಗಿ ಶಾಲಾ ಶಿಕ್ಷಣ ಇಲಾಖೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಶಾಲಾ ಬ್ಯಾಗ್ ಹೊರೆ ಇಳಿಸಲು ಈ ಹೊಸ ಪ್ಲ್ಯಾನ್ ಗೆ ಮುಂದಾಗಿದೆ,