ಭೋಪಾಲ್ : ಗುಜರಾತ್, ಜಾರ್ಖಂಡ್, ರಾಜಸ್ಥಾನ ಮತ್ತು ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಕನಿಷ್ಠ 26 ಬಾಲಕಿಯರು ಭೋಪಾಲ್ ನಲ್ಲಿ ಅಕ್ರಮವಾಗಿ ನಡೆಸುತ್ತಿರುವ ಆಶ್ರಯ ಗೃಹದಿಂದ ನಾಪತ್ತೆಯಾಗಿದ್ದಾರೆ.
ಭೋಪಾಲ್ ಹೊರವಲಯದಲ್ಲಿರುವ ಪರ್ವಾಲಿಯಾ ಪ್ರದೇಶದ ಆಂಚಲ್ ಬಾಲಕಿಯರ ಹಾಸ್ಟೆಲ್ ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್ಸಿಪಿಸಿಆರ್) ಅಧ್ಯಕ್ಷ ಪ್ರಿಯಾಂಕ್ ಕನುಂಗೊ ಅನಿರೀಕ್ಷಿತ ಭೇಟಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಆಶ್ರಯ ಗೃಹದ ರಿಜಿಸ್ಟರ್ ಅನ್ನು ಪರಿಶೀಲಿಸಿದ ನಂತರ, ಕನುಂಗೊ ಅದರಲ್ಲಿ 68 ಹುಡುಗಿಯರ ನಮೂದುಗಳಿವೆ ಎಂದು ಕಂಡುಕೊಂಡರು, ಆದರೆ ಅವರಲ್ಲಿ 26 ಮಂದಿ ಕಾಣೆಯಾಗಿದ್ದಾರೆ.
ಆಶ್ರಯ ಗೃಹದ ನಿರ್ದೇಶಕ ಅನಿಲ್ ಮ್ಯಾಥ್ಯೂ ಅವರನ್ನು ಕಾಣೆಯಾದ ಬಾಲಕಿಯರ ಬಗ್ಗೆ ಪ್ರಶ್ನಿಸಿದಾಗ, ಅವರು ಸರಿಯಾದ ಉತ್ತರಗಳನ್ನು” ನೀಡಲಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಕಾಣೆಯಾದ 26 ಬಾಲಕಿಯರು ಎಲ್ಲಿ ನಾಪತ್ತೆಯಾದರು ಎಂಬುದು ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.