HomeBusinessBIG NEWS: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತೀಯ ಆರ್ಥಿಕತೆ ಶೇ. 7.3 ರಷ್ಟು ಬೆಳವಣಿಗೆ: ಸರ್ಕಾರ...

BIG NEWS: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತೀಯ ಆರ್ಥಿಕತೆ ಶೇ. 7.3 ರಷ್ಟು ಬೆಳವಣಿಗೆ: ಸರ್ಕಾರ ಅಂದಾಜು

ನವದೆಹಲಿ: 2022-23 ರ ಹಣಕಾಸು ವರ್ಷದಲ್ಲಿ 7.2 ರಷ್ಟು ವಿಸ್ತರಣೆ ವಿರುದ್ಧ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತೀಯ ಆರ್ಥಿಕತೆಯು ಶೇಕಡ 7.3 ರಷ್ಟು ಬೆಳವಣಿಗೆಯಾಗಲಿದೆ ಎಂದು ಸರ್ಕಾರ ಶುಕ್ರವಾರ ಅಂದಾಜಿಸಿದೆ.

2023-24ರ ರಾಷ್ಟ್ರೀಯ ಆದಾಯದ ಮೊದಲ ಮುಂಗಡ ಅಂದಾಜುಗಳನ್ನು ಬಿಡುಗಡೆ ಮಾಡಿದ NSO, “2023-24ರಲ್ಲಿ ಸ್ಥಿರ(2011-12) ಬೆಲೆಗಳಲ್ಲಿ ನೈಜ GDP ಅಥವಾ GDP 171.79 ಲಕ್ಷ ಕೋಟಿ ರೂಪಾಯಿಗಳ ಮಟ್ಟವನ್ನು ತಲುಪುತ್ತದೆ ಎಂದು ಅಂದಾಜಿಸಲಾಗಿದೆ. 31 ಮೇ 2023 ರಂದು ಬಿಡುಗಡೆಯಾದ 160.06 ಲಕ್ಷ ಕೋಟಿ ರೂಪಾಯಿಗಳ 2022-23 ರ GDP ಯ ತಾತ್ಕಾಲಿಕ ಅಂದಾಜಿಗಿಂತ ಹೆಚ್ಚು ಎನ್ನಲಾಗಿದೆ.

2022-23ರಲ್ಲಿ 7.2 ಪ್ರತಿಶತಕ್ಕೆ ಹೋಲಿಸಿದರೆ 2023-24ರ ಅವಧಿಯಲ್ಲಿ ನೈಜ ಜಿಡಿಪಿಯ ಬೆಳವಣಿಗೆಯು 7.3 ಶೇಕಡಾ ಎಂದು ಅಂದಾಜಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೇ 31, 2023 ರಂದು ಬಿಡುಗಡೆ ಮಾಡಲಾದ 2022-23 ರ GDP ಯ 272.41 ಲಕ್ಷ ಕೋಟಿಗಳ ತಾತ್ಕಾಲಿಕ ಅಂದಾಜಿನ ವಿರುದ್ಧ 2023-24 ರಲ್ಲಿ ಪ್ರಸ್ತುತ ಬೆಲೆಗಳಲ್ಲಿ GDP 296.58 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. 2023-24ರ ಅವಧಿಯಲ್ಲಿ ನಾಮಮಾತ್ರ ಜಿಡಿಪಿಯ ಬೆಳವಣಿಗೆಯು 2022-23ರಲ್ಲಿ 16.1 ಪ್ರತಿಶತದ ವಿರುದ್ಧ 8.9 ಶೇಕಡ ಎಂದು ಅಂದಾಜಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular