HomeIndiaಚಲಿಸುತ್ತಿದ್ದ ರೈಲಿನಲ್ಲಿ ಪತಿ ಶವದ ಪಕ್ಕದಲ್ಲೇ 13 ಗಂಟೆ ಕೂತಿದ್ದ ಪತ್ನಿ; ಗಂಡನ ಸಾವು ಗಮನಕ್ಕೆ...

ಚಲಿಸುತ್ತಿದ್ದ ರೈಲಿನಲ್ಲಿ ಪತಿ ಶವದ ಪಕ್ಕದಲ್ಲೇ 13 ಗಂಟೆ ಕೂತಿದ್ದ ಪತ್ನಿ; ಗಂಡನ ಸಾವು ಗಮನಕ್ಕೆ ಬಾರದೇ ನಡೆದ ದುರಂತ…!

ವಿಚಿತ್ರ ಮತ್ತು ದುರಂತ ಘಟನೆಯೊಂದರಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಪತ್ನಿಯು ತನ್ನ ಮೃತ ಪತಿಯ ಪಕ್ಕದಲ್ಲಿ 13 ಗಂಟೆಗಳ ಕಾಲ ಕುಳಿತಿದ್ದರು.

ಅಹಮದಾಬಾದ್‌ನಿಂದ ಅಯೋಧ್ಯೆಗೆ ಹೋಗುವ ಸಾಬರಮತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಇಂತಹ ದುರಂತ ಘಟನೆ ವರದಿಯಾಗಿದೆ. ದಂಪತಿ ತಮ್ಮ ಮಕ್ಕಳೊಂದಿಗೆ ಸೂರತ್‌ನಿಂದ ಅಯೋಧ್ಯೆಗೆ ರೈಲು ಹತ್ತಿದ ನಂತರ ಈ ಘಟನೆ ನಡೆದಿದೆ. ವ್ಯಕ್ತಿ ಕುಟುಂಬ ಸಮೇತ ಸೂರತ್‌ನಿಂದ ಅಯೋಧ್ಯೆಗೆ ಪ್ರಯಾಣಿಸುತ್ತಿದ್ದರು. ಸೂರತ್‌ನಲ್ಲಿ ರೈಲು ಹತ್ತಿದ ವ್ಯಕ್ತಿಯೊಂದಿಗೆ ಆತನ ಪತ್ನಿ, ಮಕ್ಕಳು ಮತ್ತು ಸಹಚರರು ಇದ್ದರು. ಆದರೆ ರೈಲು ಹತ್ತಿದ ಸ್ವಲ್ಪ ಸಮಯದಲ್ಲೇ ಆ ವ್ಯಕ್ತಿ ತನ್ನ ಹೆಂಡತಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಮಲಗಿದ್ದ.

ನಂತರ ಆತ ಮೇಲೆ ಏಳಲೇ ಇಲ್ಲ. ಹಲವಾರು ಗಂಟೆಗಳ ನಂತರ ವ್ಯಕ್ತಿ ಎಚ್ಚರಗೊಳ್ಳದಿದ್ದಾಗ ಅವರ ಕುಟುಂಬದವರು ಆ ವ್ಯಕ್ತಿಯನ್ನು ಎಬ್ಬಿಸಲು ಪ್ರಯತ್ನಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ವ್ಯಕ್ತಿ ಪ್ರತಿಕ್ರಿಯಿಸಲಿಲ್ಲ. ಇದರಿಂದ ಕುಟುಂಬದವರು ಆತಂಕಗೊಂಡು ವ್ಯಕ್ತಿಯನ್ನು ಎಬ್ಬಿಸುವ ಪ್ರಯತ್ನ ಮುಂದುವರೆಸಿದ್ದರು. ಆದರೆ ಅವರಿಗೆ ಆಘಾತವಾಗುವ ಕ್ಷಣ ಅದಾಗಿತ್ತು. ಯಾಕೆಂದರೆ ವ್ಯಕ್ತಿ ಮಲಗಿದ್ದಲ್ಲೇ ಮೃತಪಟ್ಟಿದ್ದರು. ಈ ಕ್ಷಣ ಮೃತರ ಕುಟುಂಬ ಮತ್ತು ಇತರ ಪ್ರಯಾಣಿಕರು ನಂಬಲಾಗದಷ್ಟು ಆಘಾತಕ್ಕೊಳಗಾದರು. ಸಹಜ ಸ್ಥಿತಿಯಲ್ಲಿ ರೈಲು ಹತ್ತಿದ ವ್ಯಕ್ತಿ ಪ್ರಯಾಣದ ಮಧ್ಯದಲ್ಲಿ ನಿಧನರಾದರು ಎಂಬ ಸತ್ಯವನ್ನ ಅರಗಿಸಿಕೊಳ್ಳಲು ಅವರಿಗೆ ಸಾಧ್ಯವಾಗಿರಲಿಲ್ಲ.

ಸುಮಾರು 13 ಗಂಟೆಗಳ ಕಾಲ ಆ ವ್ಯಕ್ತಿ ಹೆಂಡತಿಯ ಪಕ್ಕದಲ್ಲೇ ಮಲಗಿದ್ದರೂ, ನಡೆದ ದುರಂತದ ಬಗ್ಗೆ ಅವರ ಪತ್ನಿಗೆ ಗೊತ್ತೇ ಆಗಿರಲಿಲ್ಲ. ವ್ಯಕ್ತಿ ಮೃತಪಟ್ಟಿರುವುದು ದೃಢಪಟ್ಟ ನಂತರ ಆತನ ಶವವನ್ನು ಝಾನ್ಸಿ ಜಂಕ್ಷನ್‌ನಲ್ಲಿ ಇಳಿಸಲಾಯಿತು. ಈ ಘಟನೆಯು ಪ್ರಯಾಣಿಕರಲ್ಲಿ ಆಘಾತವನ್ನು ಉಂಟುಮಾಡಿತ್ತು.

For Latest News Updates, Join Our Whatsapp Community🚩
RELATED ARTICLES

Most Popular