ಉಕ್ರೇನ್ : ರಷ್ಯಾ ಮತ್ತು ಉಕ್ರೇನ್ ಬುಧವಾರ ನೂರಾರು ಸೆರೆಯಾಳು ಸೈನಿಕರನ್ನು ವಿನಿಮಯ ಮಾಡಿಕೊಂಡಿವೆ, ಇದು ತಿಂಗಳುಗಳಲ್ಲಿ ಮೊದಲ ಯುದ್ಧ ಕೈದಿಗಳ ವಿನಿಮಯವಾಗಿದೆ.
ರಷ್ಯಾದ ರಕ್ಷಣಾ ಸಚಿವಾಲಯ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರು ತಲಾ 200 ಕ್ಕೂ ಹೆಚ್ಚು ಸೈನಿಕರನ್ನು ವಿನಿಯಮ ಮಾಡಿಕೊಂಡಿರುವುದಾಗಿ ಘೋಷಿಸಿದರು. “ನಮ್ಮ 200 ಕ್ಕೂ ಹೆಚ್ಚು ಸೈನಿಕರು ಮತ್ತು ನಾಗರಿಕರು ರಷ್ಯಾದ ಸೆರೆಯಿಂದ ಮರಳಿದ್ದಾರೆ” ಎಂದು ಜೆಲೆನ್ಸ್ಕಿ ಟೆಲಿಗ್ರಾಮ್ನಲ್ಲಿ ಸಮವಸ್ತ್ರಧಾರಿ ಪುರುಷರು ಸಂಭ್ರಮಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಒಟ್ಟು 230 ಉಕ್ರೇನ್ ಸೈನಿಕರನ್ನು ಬಿಡುಗಡೆ ಮಾಡಲಾಗಿದೆ ಎಂದು ಉಕ್ರೇನ್ ಮಾನವ ಹಕ್ಕುಗಳ ಒಂಬುಡ್ಸ್ಮನ್ ಡಿಮಿಟ್ರೊ ಲುಬಿನೆಟ್ಸ್ ಹೇಳಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ ಮಧ್ಯಸ್ಥಿಕೆಯಲ್ಲಿ ನಡೆದ “ಸಂಕೀರ್ಣ” ಮಾತುಕತೆಗಳ ನಂತರ ಬಂದ ಒಪ್ಪಂದದಲ್ಲಿ ತನ್ನ 248 ಸೈನಿಕರನ್ನು ಹಿಂದಿರುಗಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.