![](https://kannadadunia.com/wp-content/uploads/2024/01/ae763b4c-00e1-4912-bacf-004042079a16-1024x580.jpg)
ರಂಜಿತ್ ಸಿಂಗ್ ರಜಪೂತ್ ನಿರ್ದೇಶನದ ‘ಸಪ್ಲೈಯರ್ ಶಂಕರ’ ಸಿನಿಮಾ ಮುಂದಿನ ತಿಂಗಳು ಫೆಬ್ರವರಿ ಎರಡಕ್ಕೆ ರಾಜ್ಯದಾದ್ಯಂತ ತೆರೆ ಕಾಣಲಿದೆ. ಈ ಕುರಿತು ನಿರ್ಮಾಪಕರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದ ಮತ್ತೊಂದು ಭಾಗ ಕೂಡ ಬರಲಿದೆ ಎಂದು ತಿಳಿಸಿದ್ದಾರೆ.
ತ್ರಿನೇತ್ರ ಫಿಲಂ ಬ್ಯಾನರ್ ನಡಿ ಚಂದ್ರಶೇಖರ್ ಮತ್ತು ನಾಗೇಂದ್ರ ಸಿಂಗ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಆರ್ ಬಿ ಭರತ್ ಸಂಗೀತ ಸಂಯೋಜನೆ ನೀಡಿದ್ದಾರೆ.
ನಿಶ್ಚಿತ್ ಕೊರೋಡಿ ಹಾಗೂ ದೀಪಿಕಾ ಆರಾಧ್ಯ ಪ್ರಮುಖ ಪಾತ್ರದಲ್ಲಿದ್ದು, ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಡಿ ಪಾಟೀಲ್, ಜ್ಯೋತಿರಾಯ್ ಮತ್ತು ವಿಜಯ್ ವಿಶ್ವನಾಥ್ ಬಣ್ಣ ಹಚ್ಚಿದ್ದಾರೆ. ಶಾಲಾ ಶಿಕ್ಷಕಿ ಹಾಗೂ ಬಾರ್ ಸಪ್ಲೈಯರ್ ಹುಡುಗನ ಲವ್ ಸ್ಟೋರಿ ಕಥೆ ಇದಾಗಿದೆ.
![](https://kannadadunia.com/wp-content/uploads/2024/01/05acd0c7-1989-4f88-acde-b340c4d125a7-682x1024.jpg)