JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ಗೃಹ ರಕ್ಷಕ ದಳದ ಹುದ್ದೆಗೆ ಅರ್ಜಿ ಸಲ್ಲಿಸಲು ಜ.5 ಕೊನೆಯ ದಿನ

ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯಲ್ಲಿ ಖಾಲಿ ಇರುವ ಗೃಹರಕ್ಷಕ ದಳದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜನವರಿ 5 ಕೊನೆಯ ದಿನವಾಗಿದೆ.

ಎಸ್ ಎಸ್ ಎಲ್ ಸಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದ್ದು, ಆಸಕ್ತರು ಅರ್ಜಿ ನಮೂನೆಗಳನ್ನು ಸಮಾದೇಷ್ಟರವರ ಕಚೇರಿ, ಗೃಹರಕ್ಷಕ ದಳ, ಬೆಂಗಳೂರು ಉತ್ತರ ಜಿಲ್ಲೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಅಗ್ನಿಶಾಮಕ ಠಾಣೆ ಪಕ್ಕ, ರಾಜಾಜಿನಗರ, ಬೆಂಗಳೂರು-560010 ಇಲ್ಲಿಗೆ ಕಳುಹಿಸಿಕೊಡಬೇಕು. ಅರ್ಜಿಗಳನ್ನು ಜನವರಿ 5ರವರೆಗೆ ಮಧ್ಯಾಹ್ನ 2.30ರಿಂದ 5ಗಂಟೆವರೆಗೆ ಉಚಿತವಾಗಿ ವಿತರಿಸಲಾಗುವುದು.

ಹೆಚ್ಚಿನ ಮಾಹಿತಿ ಬೇಕಾದಲ್ಲಿ ಜಿಲ್ಲಾ ಸಮಾದೇಷ್ಟರವರ ಕಚೇರಿ, ಗೃಹರಕ್ಷಕ ದಳ, ಬೆಂಗಳೂರು ಉತ್ತರ ಜಿಲ್ಲೆ, ವೆಸ್ಟ್ ಆಫ್ ಕಾರ್ಡ್ ರೋಡ್, ರಾಜಾಜಿನಗರ, ಬೆಂಗಳೂರು-560010 ಅಥವಾ ದೂರವಾಣಿ ಸಂಖ್ಯೆ 080-23142542ಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read