HomeKarnatakaBIG NEWS : ರಾಜ್ಯದಲ್ಲಿ ಕೊರೊನಾ ಉಪತಳಿ 'JN1' ಸ್ಪೋಟ : ಮತ್ತೆ 165 ಪ್ರಕರಣಗಳು...

BIG NEWS : ರಾಜ್ಯದಲ್ಲಿ ಕೊರೊನಾ ಉಪತಳಿ ‘JN1’ ಸ್ಪೋಟ : ಮತ್ತೆ 165 ಪ್ರಕರಣಗಳು ಪತ್ತೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಉಪತಳಿ ಜೆಎನ್ 1 ಸ್ಪೋಟವಾಗಿದ್ದು, ಮತ್ತೆ 165 ಪ್ರಕರಣಗಳು ಪತ್ತೆಯಾಗಿದೆ.

ಹೌದು, ರಾಜ್ಯದಲ್ಲಿ ಕಳೆದ ನಾಲ್ಕು ವಾರಗಳಿಂದ ಕೊರೊನಾ ಸೋಂಕು ಭಾರಿ ಏರಿಕೆಯಾಗುತ್ತಿದ್ದು, ಇದಕ್ಕೆ ಜೆ ಎನ್ 1 ಉಪತಳಿಯೇ ಕಾರಣ ಎಂದು ಹೇಳಲಾಗಿದೆ. ಮತ್ತೆ 165 ಜೆಎನ್ 1 ಸೋಂಕು ಪ್ರಕರಣಗಳು ವರದಿಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ನಿನ್ನೆ 296 ಜನರಿಗೆ ಕೋರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮೈಸೂರಿನಲ್ಲಿ ಒಂದು ಸಾವು ವರದಿಯಾಗಿದೆ. ಬೆಂಗಳೂರಿನಲ್ಲಿ 131 ಜನರಿಗೆ ಸೋಂಕು ತಗುಲಿದ್ದು, ರಾಜ್ಯದಲ್ಲಿ ಪಾಸಿಟಿವಿಟಿದ ದರ ಶೇ. 5.89 ರಷ್ಟು ಇದೆ ಕಳೆದ. 24 ಗಂಟೆಗಳ ಅವಧಿಯಲ್ಲಿ 5021 ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ. 1245 ಜನರಲ್ಲಿ ಸೋಂಕು ಸಕ್ರಿಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಿ.25ರಂದು 60 ಮಾದರಿಗಳ ವರದಿ ಬಂದಿದ್ದು 34 ಮಂದಿಗೆ ಜೆಎನ್1 ಉಪತಳಿ ಸೋಂಕು ದೃಢಪಟ್ಟಿತ್ತು. ಸೋಮವಾರದ ವೇಳೆಗೆ 296 ಸೋಂಕು ಪ್ರಕರಣಗಳ ಜಿನೋಮಿಕ್ ಸೀಕ್ವೆನ್ ವರದಿ ಬಂದಿದೆ. 296 ರಲ್ಲಿ ಬರೋಬ್ಬರಿ 199 ಮಂದಿಗೆ ಜೆಎನ್.1 ಉಪತಳಿ ಹರಡಿರುವುದು ದೃಢಪಟ್ಟಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular