alex Certify Bengaluru : ‘ಆಸ್ತಿ ತೆರಿಗೆ’ ಪಾವತಿಸದ ಮಾಲ್ ಗಳ ವಿರುದ್ಧ ‘BBMP’ ಸಮರ : ನೋಟಿಸ್ ನೀಡಿ ಬೀಗ ಹಾಕಲು ಚಿಂತನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Bengaluru : ‘ಆಸ್ತಿ ತೆರಿಗೆ’ ಪಾವತಿಸದ ಮಾಲ್ ಗಳ ವಿರುದ್ಧ ‘BBMP’ ಸಮರ : ನೋಟಿಸ್ ನೀಡಿ ಬೀಗ ಹಾಕಲು ಚಿಂತನೆ

ಬೆಂಗಳೂರು : ಮಾಲ್ ಗಳ ವಿರುದ್ಧ ‘BBMP’ ( ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ) ಸಮರ ಸಾರಿದ್ದು, ನೋಟಿಸ್ ನೀಡಿ ಬೀಗ ಹಾಕಲು ಚಿಂತನೆ ನಡೆಸಿದೆ.

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರೋ ಮಾಲ್ ಗಳ ವಿರುದ್ಧವೂ ಸಮರ ಸಾರಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ. ಖುದ್ದಾಗಿ ಬಿಬಿಎಂಪಿ ಅಧಿಕಾರಿಗಳೇ ಆಸ್ತಿ ತೆರಿಗೆ ವಸೂಲಿ ನೋಟಿಸ್ ನೀಡಲಿದ್ದಾರೆ.  ಒಂದು ವೇಳೆ ನೋಟಿಸ್  ಗೆ   ಉತ್ತರ ಕೊಡದಿದ್ದರೆ ಚರಾಸ್ತಿ ವಶಪಡಿಸಿಕೊಳ್ಳುತ್ತೇವೆ. ಇಲ್ಲದೇ ಇದ್ದರೆ ಮಾಲ್ ಗಳಿಗೆ ಬೀಗ ಹಾಕುವುದಾಗಿ ಬಿಬಿಎಂಪಿ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ. ಮಾಲ್ ಮಾತ್ರವಲ್ಲದೇ ಯಾರೆಲ್ಲಾ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೋ ಅವರಿಗೂ ನೋಟಿಸ್ ನೀಡಲು ಬಿಬಿಎಂಪಿ ಸಿದ್ದತೆ ನಡೆಸಿದೆ.

ಈ ವರ್ಷ ಎರಡೂವರೆ ಸಾವಿರ ಕೋಟಿ ಆಸ್ತಿತೆರಿಗೆ ವಸೂಲಿ ಮಾಡುವ ಗುರಿಯನ್ನ ಬಿಬಿಎಂಪಿ ಹೊಂದಿದ್ದು, 50 ಸಾವಿರ ನೋಟಿಸ್ ಗಳನ್ನು ಬಿಬಿಎಂಪಿ ನೀಡಲಿದೆಯಂತೆ. ಕೆಲವರಿಗೆ SMS  ಮೂಲಕವೂ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...