HomeInternationalBREAKING : ಹೊಸ ವರ್ಷಕ್ಕೂ ಮುನ್ನ ನೇಪಾಳದಲ್ಲಿ 4.3 ತೀವ್ರತೆಯ ಪ್ರಬಲ ಭೂಕಂಪ| Earthquake in...

BREAKING : ಹೊಸ ವರ್ಷಕ್ಕೂ ಮುನ್ನ ನೇಪಾಳದಲ್ಲಿ 4.3 ತೀವ್ರತೆಯ ಪ್ರಬಲ ಭೂಕಂಪ| Earthquake in Nepal

ಕಠ್ಮಂಡು: ಇಡೀ ದೇಶ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮುಳುಗಿರುವಾಗ, ನೇಪಾಳದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ನೇಪಾಳದಲ್ಲಿ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.3 ರಷ್ಟಿತ್ತು.

ಹೊಸ ವರ್ಷವನ್ನು ಆಚರಿಸಲು ಅನೇಕ ಸ್ಥಳಗಳಲ್ಲಿ ಜನರು ಜಮಾಯಿಸಿದ್ದ ವೇಳೆ ತಡರಾತ್ರಿ ಭೂಕಂಪ ಸಂಭವಿಸಿದ್ದು, ಹೊಸ ವರ್ಷವನ್ನು ಆಚರಿಸುತ್ತಿರುವ ಜನರು ಭೂಕಂಪನದ ಅನುಭವವಾದ ಕೂಡಲೇ ಆಘಾತಕ್ಕೊಳಗಾಗಿದ್ದಾರೆ.

ನೇಪಾಳದಲ್ಲಿ 2023 ವರ್ಷವು ಭೂಕಂಪದಂತಹ ದುರಂತದೊಂದಿಗೆ ಪ್ರಾರಂಭವಾಯಿತು. ಈ ವರ್ಷ ನೇಪಾಳದಲ್ಲಿ ಹಲವು ಬಾರಿ ಭೂಕಂಪ ಸಂಭವಿಸಿತ್ತು. ಈ ವರ್ಷ, ಜನವರಿ 24 ರಂದು 5.9 ತೀವ್ರತೆಯ ಭೂಕಂಪ, ಫೆಬ್ರವರಿ 22 ರಂದು 5.2 ಮತ್ತು ಅಕ್ಟೋಬರ್ 22 ರಂದು 6.1 ತೀವ್ರತೆಯ ಭೂಕಂಪ ಸೇರಿದಂತೆ ಹಲವು ಬಾರಿ 5.0 ತೀವ್ರತೆಯ ಭೂಕಂಪಗಳು ಇಲ್ಲಿ ದಾಖಲಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular