ಬೆಂಗಳೂರು : ಬೆಂಗಳೂರಿನ ಬ್ಯಾಟರಾಯನಪುರ ಬಳಿ ಇರುವ ಮಾಲ್ ಆಫ್ ಏಷ್ಯಾವನ್ನು ಭಾನುವಾರದಿಂದ ( ಇಂದಿನಿಂದ) 16ದಿನಗಳ ಕಾಲ ಬಂದ್ ಮಾಡುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ. ಡಿ.31ರಿಂದ ಜನವರಿ 15ರವರೆಗೆ ಮಾಲ್ ಬಂದ್ ಆಗಲಿದ್ದು, ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.
ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಬಳಕೆ ಮಾಡಬೇಕು, ಇಲ್ಲವಾದಲ್ಲಿ ಮಾಲ್ ಧ್ವಂಸ ಮಾಡುತ್ತೇವೆ ಎಂದು ಮಾಲ್ ಆಫ್ ಏಷ್ಯಾ ಎದುರು ಕನ್ನಡ ಪರ ಹೋರಾಟಗಾರರು ತೀವ್ರ ಪ್ರತಿಭಟನೆ ನಡೆಸಿದ್ದರು. ಈ ಬೆನ್ನಲ್ಲೇ ಕಾನೂನು, ಸುವ್ಯವಸ್ಥೆ ನಿರ್ವಹಿಸುವ ದೃಷ್ಟಿಯಿಂದ ಮಾಲ್ನಲ್ಲಿನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಮಾಲ್ ಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ರಸ್ತೆ ದಟ್ಟಣೆ ಆಗುತ್ತಿದೆ, ಸುಗಮ ಸಂಚಾರಕ್ಕೆ ಅವಕಾಶವಾಗುತ್ತಿಲ್ಲವೆಂದು ಆರೋಪಿಸಿದ್ದರು. ಮಾಲ್ನಲ್ಲಿವಾಹನಗಳ ಪಾರ್ಕಿಂಗ್ಗೆ ಸ್ಥಳದ ಕೊರತೆ ಉಂಟಾಗಿ ಸಾರ್ವಜನಿಕರು ರಸ್ತೆ, ಫುಟ್ಪಾತ್ಗಳಲ್ಲಿಯೂ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರ ಹಾಕಿದ್ದರು. ಈ ಹಿನ್ನೆಲೆ ಮಾಲ್ ಆಫ್ ಏಷ್ಯಾವನ್ನು ಭಾನುವಾರದಿಂದ ( ಇಂದಿನಿಂದ) 16ದಿನಗಳ ಕಾಲ ಬಂದ್ ಮಾಡುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ.