HomeKarnatakaBIG NEWS: ಪರ್ಸ್ ಹುಡುಕಲು ಸಹಕರಿಸಿಲ್ಲ ಎಂದು ಬಾಂಬ್ ಬೆದರಿಕೆ ಕರೆ; ಜೈಲುಪಾಲಾದ ಪ್ರಯಾಣಿಕ

BIG NEWS: ಪರ್ಸ್ ಹುಡುಕಲು ಸಹಕರಿಸಿಲ್ಲ ಎಂದು ಬಾಂಬ್ ಬೆದರಿಕೆ ಕರೆ; ಜೈಲುಪಾಲಾದ ಪ್ರಯಾಣಿಕ

ಬೆಂಗಳೂರು: ಪರ್ಸ್ ಹುಡುಕಲು ವಿಮಾನ ಸಿಬ್ಬಂದಿ ಸಹಕರಿಸಿಲ್ಲ ಎಂದು ಬಾಂಬ್ ಬೆದರಿಕೆ ಕರೆ ಮಾಡಿ ಪ್ರಯಾಣಿಕನೊಬ್ಬ ಜೈಲುಪಾಲಾಗಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಬಾಂಬ್ ಬೆದರಿಕೆ ಕರೆ ಮಾಡಿದ್ದ ಶ್ರೇಯಸ್ ಚಾರ್ಮಿಯಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 26ರಂದು ನಡೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶ್ರೇಯಸ್ ಚಾರ್ಮಿಯಾ ದೆಹಲಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸ್ಪೈಸ್ ಜೆಟ್ ನಲ್ಲಿ ಆಗಮಿಸಿದ್ದ. ಈ ವೇಳೆ ಪರ್ಸ್ ಕಳೆದುಕೊಂಡಿದ್ದು, ಪರ್ಸ್ ಹುಡುಕಿಕೊಡಲು ಸಹಾಯ ಮಾಡಿಲ್ಲ ಎಂದು ವಿಮಾನದ ಕಾಲ್ ಸೆಂಟರ್ ಗೆ ಕರೆ ಮಾಡಿ ಬಾಂಬ್ ಬೆದರಿಕೆ ಹಾಕಿದ್ದಾನೆ.

ಕೆಂಪೇಗೌಡ ಏರ್ ಪೋರ್ಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ಶ್ರೇಯಸ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular