ಇತ್ತೀಚೆಗೆ ಭಾರತೀಯ ರೈಲ್ವೆ ಸೇವೆಯ ಬಗ್ಗೆ ಹಲವು ದೂರುಗಳು ಕೇಳಿಬರುತ್ತಿವೆ. ಇದೀಗ ಮತ್ತೊಂದು ಘಟನೆಯಲ್ಲಿ ರೈಲು 9 ಗಂಟೆ ತಡವಾಗಿ ಬಂದಿದ್ದರಿಂದ ವ್ಯಕ್ತಿಯೊಬ್ಬರಿಗೆ 6 ಸಾವಿರ ರಪಾಯಿ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕ್ರಿಸ್ ಮಸ್ ರಜೆ, ಹೊಸ ವರ್ಷಾಚರಣೆ ಸಮಯದಲ್ಲಿ ವಿಪರೀತ ಜನಸಂದಣಿ ಮತ್ತು ರೈಲು ವಿಳಂಬವು ಸಾಮಾನ್ಯ ಘಟನೆಯಾಗಿದೆ. ಆದಾಗ್ಯೂ ಉತ್ತರ ಭಾರತದಾದ್ಯಂತ ದಟ್ಟ ಮಂಜಿನಿಂದಾಗಿ ರೈಲು, ವಿಮಾನ ಸೇವೆಗಳಲ್ಲಿ ವ್ಯತ್ಯಯವಾಗ್ತಿದೆ. ಇದರಿಂದಾಗಿ ಹಲವಾರು ರೈಲುಗಳು ವಿಳಂಬವಾಗಿವೆ ಅಥವಾ ರದ್ದುಗೊಂಡಿವೆ.
ಕಾನ್ಪುರದ ವ್ಯಕ್ತಿಯೊಬ್ಬರು ತಮ್ಮ ರೈಲು ಒಂಬತ್ತು ಗಂಟೆಗಳಷ್ಟು ತಡವಾಗಿ ಬಂದಿದ್ದವರಿಗೆ ತಮಗಾದ ತೊಂದರೆ ಮತ್ತು ನಷ್ಟವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
“ನಾನು ಕಾನ್ಪುರದಲ್ಲಿ ಮಧ್ಯಾಹ್ನ 1.15 ಕ್ಕೆ ಹೋಗಬೇಕಾದ ರೈಲು 9 ಗಂಟೆ ತಡವಾಗಿ ಬಂದಿತು. ನಾನು ರಾತ್ರಿ 8.15 ಕ್ಕೆ ರಾಜಧಾನಿ ಝಾನ್ಸಿಯನ್ನು ತಲುಪಬೇಕಿತ್ತು. 2 ಗಂಟೆಗೆ ರೈಲು ತಡವಾಗಿ ಬರಲಿದೆ ಎಂದು ನನಗೆ ತಿಳಿಯಿತು. ಹಾಗಾಗಿ ನನಗೆ ಬೇರೆ ದಾರಿಯಿಲ್ಲದೇ ನಾನು 4500 ರೂಪಾಯಿಗೆ ಓಲಾ ಬುಕ್ ಮಾಡಿ ಝಾನ್ಸಿ ತಲುಪಬೇಕಾಯಿತು. ತತ್ಕಾಲ್ ಟಿಕೆಟ್ ಅನ್ನು 1,500 ರೂಪಾಯಿಗೆ ಖರೀದಿಸಲಾಗಿತ್ತು. ರೈಲು ವಿಳಂಬದಿಂದ ನನಗೆ ಒಟ್ಟು 6,000 ರೂ. ನಷ್ಟವಾಗಿದೆ ”ಎಂದು ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ಹಲವಾರು ಬಳಕೆದಾರರು ರೈಲು ವಿಳಂಬದ ಬಗ್ಗೆ ತಮ್ಮ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ. ನನ್ನ ರೈಲು ದೆಹಲಿಯಿಂದ ನ್ಯೂಯಾರ್ಕ್‌ಗೆ ಹೋಗುವ ಸಮಯಕ್ಕಿಂತ ವೇಗವಾಗಿ 16 ಗಂಟೆ ತಡವಾಗಿ ದೆಹಲಿಯಿಂದ ಪಶ್ಚಿಮ ಬಂಗಾಳಕ್ಕೆ ಹೋಯಿತು ಎಂದು ವ್ಯಂಗ್ಯದ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬರು, “ನಾನು ನಾಗ್ಪುರ-ಹೈದರಾಬಾದ್ ರೈಲು ಸಂಖ್ಯೆ 12724 ತೆಲಂಗಾಣ ಎ-ಹೈದರಾಬಾದ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದೇನೆ. ರೈಲು ಬೆಳಗ್ಗೆ 7.10ಕ್ಕೆ ಬರಬೇಕಿತ್ತು ಆದರೆ ಮಧ್ಯಾಹ್ನ 3.30ಕ್ಕೆ ತಲುಪಿತು. ನಾನು ರಾತ್ರಿ 8 ಗಂಟೆಗೆ ನನ್ನ ರಾತ್ರಿ ಪಾಳಿಯನ್ನು ಹೊಂದಿದ್ದೇನೆ, ಆದರೆ ರೈಲು 9 ಗಂಟೆ ತಡವಾಗಿ ಚಲಿಸುತ್ತಿದೆ. ನನ್ನ ವೇತನದ ನಷ್ಟಕ್ಕೆ ಯಾರು ಹೊಣೆ?” ಎಂದು ಪ್ರಶ್ನಿಸಿದ್ದಾರೆ.